ನವದೆಹಲಿ: 2016-17ನೇ ಆರ್ಥಿಕ ವರ್ಷದಲ್ಲಿ ಭಾರತೀಯರ ತಲಾದಾಯ 1 ಲಕ್ಷ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. 2015-16ನೇ ಸಾಲಿನಲ್ಲಿ ಭಾರತೀಯರ ತಲಾದಾಯ 93,293 ಇದ್ದು, ಈ ಆರ್ಥಿಕ ವರ್ಷದಲ್ಲಿ 103,007ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಅಂಕಿ ಅಂಶಗಳ ಕಚೇರಿ ಬಿಡುಗಡೆ ಮಾಡಿದ ‘ರಾಷ್ಟ್ರೀಯ ಆದಾಯ 2016-17, ಮುಂಗಡ ಅಂದಾಜು’ ಪ್ರಕಾರ ಇದು ಶೇ. 10.4 ಅಧಿಕವಾಗಿದೆ. ಆದರೆ ತಲಾದಾಯ ಅಭಿವೃಧಿ ದರ ೨೦೧೫-೧೬ನೇ ಆರ್ಥಿಕ ವರ್ಷದಲ್ಲಿ ಶೇ. 6.2ಕ್ಕೆ ಹೋಲಿಸಿದರೆ 2016-17ರಲ್ಲಿ ಶೇ. 5.6 ಇರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ತಲಾದಾಯದ ಮೂಲಕ ಜನರ ಜೀವನ ಮಟ್ಟವನ್ನು ಅಳೆಯಲಾಗುತ್ತದೆ.
ಉತ್ಪಾದನೆ, ಗಣಿಗಾರಿಕೆ, ನಿರ್ಮಾಣಗಳಲ್ಲಿ ಏರುಪೇರಿನ ಕಾರಣ ಭಾರತದ ಜಿಡಿಪಿ ಕಳೆದ ವರ್ಷದ 7.6ರಿಂದ 7.1ಕ್ಕೆ ಕುಸಿಯಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.