ಬೆಂಗಳೂರು : ಎಪಿಎಲ್ ಪಡಿತರ ಚೀಟಿಯನ್ನು ಆನ್ಲೈನ್ನಲ್ಲೇ ಪಡೆಯುವ ನೂತನ ಯೋಜನೆಗೆ ರಾಜ್ಯ ಸರ್ಕಾರವು ಜನವರಿ 9 ರಂದು ಚಾಲನೆ ನೀಡಲಿದೆ.
ಆನ್ಲೈನ್ನಲ್ಲಿ ಎಪಿಎಲ್ ಪಡಿತರ ಚೀಟಿಯನ್ನು ahara.nic.in ವೆಬ್ಸೈಟ್ನಲ್ಲಿ ಲಭ್ಯವಿರುವ ಲಿಂಕ್ನಲ್ಲಿ ಆಧಾರ್ ಗುರುತಿನ ಸಂಖ್ಯೆ ದಾಖಲಿಸಿ ಕೂಡಲೇ ಎಪಿಎಲ್ ಪಡಿತರ ಚೀಟಿ ಪಡೆಯಬಹುದಾಗಿದೆ. ಆಧಾರ್ ಗುರುತಿನ ಸಂಖ್ಯೆ ನೀಡಿದ ಬಳಿಕ ಒನ್ ಟೈಮ್ ಪಾಸ್ವರ್ಡ್(ಒಟಿಪಿ) ಅಥವಾ ಬೆರಳಚ್ಚು ದಾಖಲಿಸ ಬೇಕಾಗುತ್ತದೆ. ಒಟಿಪಿ ನೀಡಿ ನಂತರ ನೋಂದಣಿ ಮಾಡಬಹುದು. ಕುಟುಂಬದ ಎಲ್ಲ ಸದಸ್ಯರನ್ನು ಒಂದೇ ಪುಟದಲ್ಲಿ ಸೇರಿಸಿ ವಿಳಾಸ ಮತ್ತು ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡಿ ಎಪಿಎಲ್ ಪಡಿತರ ಚೀಟಿ ಪಡೆಯಬಹುದಾಗಿದೆ. ಸರ್ಕಾರ ನೀಡುವ 15 ಕೆ. ಜಿ. ಅಕ್ಕಿ ಹಾಗೂ 10 ಕೆ. ಜಿ. ಗೋಧಿ ಅಗತ್ಯವಿದೆಯೇ ಎಂಬುದನ್ನು ನೋಂದಣಿ ಮಾಡುವ ಸಮಯದಲ್ಲಿ ಸ್ಪಷ್ಟಪಡಿಸಬೇಕು. ಮುದ್ರಿತ ಪಡಿತರ ಚೀಟಿ ಬೇಕಿದ್ದರೆ 15 ದಿನಗಳೊಳಗೆ ಆಧಾರ್ ಕಾರ್ಡ್ನಲ್ಲಿರುವ ವಿಳಾಸಕ್ಕೆ ಬರುತ್ತದೆ. ಮನೆಗೆ ಎಪಿಎಲ್ ಕಾರ್ಡ್ ಬಂದಾಗ ಅಂಚೆ ಇಲಾಖೆಯವರಿಗೆ 100 ರೂ. ಪಾವತಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಹೊಸ ಪಡಿತರ ಚೀಟಿ ಪಡೆಯಲು ಅವಕಾಶ ಇರುವ ಹಿನ್ನಲೆಯಲ್ಲಿ ಈ ಹಿಂದೆ ಎಪಿಎಲ್ ಕಾರ್ಡ್ ಹೊಂದಿರುವವರೂ ಕೂಡಾ ಆಧಾರ್ ಸಂಖ್ಯೆ ಬಳಸಿ ಹೊಸ ಕಾರ್ಡ್ ಪಡೆಯುವುದು ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ಇರುವವರು ಆಧಾರ್ ನಂಬರ್ ಲಿಂಕ್ ಮಾಡಿಸಬೇಕಾಗುತ್ತದೆ. ಈಗಾಗಲೇ ಸುಮಾರು 10 ಲಕ್ಷ ಅರ್ಜಿಗಳು ಬಿಪಿಎಲ್ ಜೊತೆ ಆಧಾರ್ ನಂಬರ್ ಲಿಂಕ್ ಆಗದೆ ಹಾಗೇ ಇವೆ. ಅಂತಹವರು ಸ್ಥಳೀಯ ಗ್ರಾಮ ಪಂಚಾಯತಿ ಅಥವಾ ಸ್ಥಳೀಯ ನಗರ ಸಂಸ್ಥೆಗಳಿಗೆ ಹೋಗಿ ಆನ್ಲೈನ್ ನೋಂದಣಿ ಮಾಡಿಸಿಕೊಳ್ಳಬೇಕು. ಆಧಾರ್ ನಂಬರ್ ಜೊತೆಗೆ ಬೆರಳಚ್ಚು ನೀಡಿದರೆ ನೇರವಾಗಿ ನೋಂದಣಿಯಾಗುತ್ತದೆ. ನೊಂದಾಯಿತ ವಿಳಾಸಕ್ಕೆ 15 ದಿನಗಳಲ್ಲಿ ಬಿಪಿಎಲ್ ಪಡಿತರ ಕಾರ್ಡ್ ಬರುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.