ಕೊಯಂಬತ್ತೂರು: ದಕ್ಷಿಣ ಭಾರತದ ಮೋಸ್ಟ್ ವಾಟೆಂಡ್ ಮಾವೋವಾದಿ ರೂಪೇಶ್ ಮತ್ತು ಆತನ ಹೆಂಡತಿಯನ್ನು ಇತರ ಮೂವರು ಸಹಚರರೊಂದಿಗೆ ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈತ ಬಲೆಗೆ ಬಿದ್ದಿದ್ದಾನೆ. ಈತ 20 ಪ್ರಕರಣಗಳಲ್ಲಿ ಕೇರಳಕ್ಕೆ ಬೇಕಾಗಿದ್ದ. ಈತನ ಬಂಧನದ ವಿಷಯವನ್ನು ಕೇರಳ ಗೃಹಸಚಿವ ರಮೇಶ್ ಚೆನ್ನಿತಾಲ ಸೋಮವಾರ ರಾತ್ರಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ನಾಲ್ಕು ರಾಜ್ಯಗಳ ಪ್ರಯತ್ನದಿಂದಾಗಿ ದೊಡ್ಡ ಯಶಸ್ಸು ದೊರೆಯಿತು ಎಂದು ಅವರು ಹೇಳಿದ್ದಾರೆ.
ಆತನ ಪತ್ನಿ ಶೈನಾ, ಸಹಚರರಾದ ಕೇರಳದ ಅನುಪ್ ಕುಮಾರ್, ಕರ್ನಾಟಕದ ವೀರಮಣಿ, ತಮಿಳುನಾಡಿನ ಕಣ್ಣನ್ ಬಂಧಿತರು. ಇವರೆಲ್ಲಾ ಮಾವೋವಾದಿ ಚಟುವಟಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ರೂಪೇಶ್ ಕೇರಳದ ಪಲ್ಲಕಾಡ್ ಮತ್ತು ವಯನಾಡಿನಲ್ಲಿ ಇತ್ತೀಚಿಗೆ ನಡೆದ ಮಾವೋವಾದಿ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಈತ ಕಾನೂನು ಪದವೀಧರನಾಗಿದ್ದು ಕಾಲೇಜು ದಿನಗಳಲ್ಲೇ ಮಾವೋವಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.