ಸೂರತ್: ಒಂದು ಸರ್ಕಾರೇತರ ಸಂಸ್ಥೆ (ಎನ್ಜಿಒ) ಸೂರತ್ನಲ್ಲಿ ಎಚ್ಐವಿ+ ರೋಗಿಗಳಿಗೆ ವಿಶೇಷ ವಿವಾಹ ಸಮಾಲೋಚನೆ ಉತ್ಸವ ಆಯೋಜಿಸಿದೆ.
ಗುಜರಾತ್ ಸ್ಟೇಟ್ ನೆಟ್ವರ್ಕ್ ಆಫ್ ಪೀಪಲ್ (ಜಿಎಸ್ಎನ್ಪಿ+) ಎನ್ಜಿಒ ಸಂಸ್ಥೆ ಎಚ್ಐವಿ/ಏಡ್ಸ್ನಿಂದ ಬಳಲುತ್ತಿರುವ ವಧು-ವರರಿಗೆ ಸಲಹೆ, ಸೂಚನೆಯನ್ನು ನೀಡುವ ಸೇವೆ ಒದಗಿಸುತ್ತಿದ್ದು, ಸಂಸ್ಥೆ ಕಳೆದ 9 ವರ್ಷಗಳಿಂದ ಸೂರತ್ನಲ್ಲಿ ಈ ಉತ್ಸವವನ್ನು ಆಯೋಜಿಸುತ್ತಿದೆ.
ಸಮಾಜದಿಂದ ಬಹಿಷ್ಕರಿಸಲ್ಪಪಟ್ಟ ನೂರಾರು ಮಂದಿ ಸೂಕ್ತ ಜೀವನ ಸಂಗಾತಿಯನ್ನು ಹುಡುಕಲು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಈ ‘ಜೀವನ್ಸಾಥಿ ಪಸಂದ್ಗಿ ಮೇಳ’ ಅಥವಾ ಸಮಾಲೋಚನಾ ಮೇಳದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಗುಜರಾತ್ನ ಎಚ್ಐವಿ ಪಾಸಿಟಿವ್ ಜನರು ಇದರಲ್ಲಿ ಆಗಮಿಸಿದ್ದರು ಎಂದು ಇದರ ಯೋಜನಾ ನಿರ್ದೇಶಕ ದಕ್ಷ ಪಟೇಲ್ ಹೇಳಿದ್ದಾರೆ.
ಭಾರತದಲ್ಲಿ ವಿಶ್ವದಲ್ಲೇ ಮೂರನೇ ಅತ್ಯಧಿಕ ಸಂಖ್ಯೆ ಎಚ್ಐವಿ+ ಜನರಿದ್ದಾರೆ. ಭಾರತದಲ್ಲಿ ೨.೧ ಮಿಲಿಯನ್ ಎಚ್ಐವಿ ಪೀಡಿತ ಜನರಿದ್ದು, ಏಷ್ಯಾದ ಪ್ರತಿ 10ರಲ್ಲಿ 4 ಮಂದಿ ಭಾರತೀಯರಿದ್ದಾರೆ ಎಂದು ೨೦೧೪ರ ವಿಶ್ವಸಂಸ್ಥೆ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.