ತಿರುವನಂತಪುರಂ: ಭಾರತದ ಬಹುಸಂಸ್ಕೃತಿ, ಭಾಷೆ, ಸಾಮಾಜಿಕ, ಸಾಂಸ್ಕತಿಕ, ಧಾರ್ಮಿಕ ವೈವಿಧ್ಯತೆ ದೇಶದ ಅತಿ ದೊಡ್ಡ ಶಕ್ತಿಯಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ 77ನೇ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಮುಖರ್ಜಿ ಅವರು, ಇತಿಹಾಸ ಉದ್ದೇಶಿತ ಅನ್ವೇಷಣೆಗೆ ನ್ಯಾಯಾಧೀಶರ ನಿಷ್ಪಕ್ಷಪಾತ ಮನಸ್ಸು ಅಗತ್ಯವಿದೇಯೇ ಹೊರತು ವಕೀಲರ ಬುದ್ಧಿ ಅಲ್ಲ. ನಾವು ಅಪರಿಚಿತ, ಗುರುತಿಸಲ್ಪಡದ ವಿಚಾರಗಳನ್ನು ತೆರೆದ ಕಣ್ಣುಗಳಿಂದ ನೋಡಿ ತಿಳಿದುಕೊಳ್ಳಬೇಕು. ಜೊತೆಗೆ ವಿವಿಧ ತೀರ್ಮಾನಗಳನ್ನು, ಕಲ್ಪನೆಗಳನ್ನು ಪರಿಗಣಿಸಿ ಸ್ವೀಕರಿಸಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಗೊಳಿಸಲು ಅನುಮಾನ, ಭಿನ್ನಾಭಿಪ್ರಾಯ/ಅಸಮ್ಮತಿ, ಬೌದ್ಧಿಕ ವಿವಾದಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಅಗತ್ಯ. ಚರ್ಚೆಗಳು, ವಾದಗಳು, ತರ್ಕಗಳು ಸಮಂಜಸ ಕಾರಣಗಳಿಂದ ಚೌಕಟ್ಟಿನಿಂದ ಹೊರಗಿಬಾರದು ಎಂದು ರಾಷ್ಟ್ರಪತಿ ಮುಖರ್ಜಿ ಹೇಳಿದ್ದಾರೆ.
ನಮ್ಮ ಸಂಪ್ರದಾಯಗಳು ಯಾವಾಗಲೂ ‘ವಾದ ಮಂಡನೆ’ ನಡೆಸುವ ಭಾರತೀಯರಿಂದ ಕೂಡಿದೆ. ಅಸಹಿಷ್ಣುತೆಯಿಂದ ಕೂಡಿದ ಭಾರತೀಯರಿಂದ ಅಲ್ಲ ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಾಖಲೆ ಹೊಂದಿದೆ. ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಇತಿಹಾಸದ ವಸ್ತುನಿಷ್ಟ ಅಧ್ಯಯದಲ್ಲಿ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಿ ಮುನ್ನಡೆಯಲಿದೆ ಎಂದು ಭಾವಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.