ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮುಂಬಯಿ, ದೆಹಲಿ ಸೇರಿದಂತೆ ವಿವಿಧೆಡೆಗಳಲ್ಲಿ ಇಂಟೀಗ್ರೇಟೆಡ್ ವಾಯ್ಸ್ ರೆಸ್ಪಾನ್ಸ್ ವ್ಯವಸ್ಥೆ (ಐವಿಆರ್ಎಸ್)ಯನ್ನು ಸ್ಥಾಪಿಸಿದೆ.
ಈ ಮೂಲಕ ಗ್ರಾಹಕರಿಂದ ಕರೆಯ ಗುಣಮಟ್ಟದ ಬಗ್ಗೆ ನೇರವಾಗಿ ಪ್ರತಿಕ್ರಿಯೆ ಪಡೆಯಲು ಸರ್ಕಾರ ಉದ್ದೇಶಿಸಿದೆ.
ಗ್ರಾಹಕರ ಪ್ರತಿಕ್ರಿಯೆಯನ್ನು ಟೆಲಿಕಾಂ ನಿರ್ವಾಹಕರ ಜೊತೆ ಹಂಚಲಾಗುತ್ತಿದ್ದು, ನಿರ್ವಾಹಕರು ಆ ಮೂಲಕ ಸಮಸ್ಯೆಯನ್ನು ಗುರುತಿಸಿ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗಲಿದೆ. ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಅಧಿಕೃತ ವರದಿ ತಿಳಿಸಿದೆ.
ಟೆಲಿಕಾಂ ಇಲಾಖೆ ಈ ವ್ಯವಸ್ಥೆಯನ್ನು ಈಗಾಹಲೇ ಮುಂಬಯಿ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಗೋವಾದಲ್ಲಿ ಸ್ಥಾಪಿಸಿದೆ.
ಗ್ರಾಹಕರು ಶಾರ್ಟ್ ಕೋಡ್ ೧೯೫೫ ಮೂಲಕ ಐವಿಆರ್ಎಸ್ ಕರೆ ಸ್ವೀಕರಿಸಲಿದ್ದು, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುವುದು. ಗ್ರಾಹಕರು ಈ ಶಾರ್ಟ್ ಕೋಡ್ 1955ಗೆ ಎಸ್ಎಂಎಸ್ ಪ್ರತಿಕ್ರಿಯೆ ಕೂಡ ನೀಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.