ನವದೆಹಲಿ: ಕೇಂದ್ರ ಸರ್ಕಾರ ನಿಷೇಧಿತ ನೋಟುಗಳನ್ನು ಹೊಂದಿದವರ ಮೇಲೆ ದಂಡ ವಿಧಿಸಲು ಮುಂದಾಗಿದ್ದು, ಇದೀಗ ಕೇಂದ್ರ ಸಚಿವ ಸಂಪುಟ ಮಾರ್ಚ್ 31ರ ಬಳಿಕ 10ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹಳೆ ನಿಷೇಧಿತ ರೂ.500 ಮತ್ತು 1000 ರೂ. ನೋಟುಗಳನ್ನು ಹೊಂದಿದಲ್ಲಿ ಅವರ ಮೇಲೆ 50 ಸಾವಿರ ರೂ. ದಂಡ ಹಾಗೂ 4 ವರ್ಷ ಜೈಲು ಶಿಕ್ಷೆ ವಿಧಿಸುವ ವಿಧೇಯಕಕ್ಕೆ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಈ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಲಾಗಿದ್ದು, ಹೆಚ್ಚಿನ ಮುಖಬೆಲೆಯ ನೋಟುಗಳ ನಿಷೇಧದಿಂದ ಕೇಂದ್ರ ಸರ್ಕಾರದ ನಷ್ಟವನ್ನು ಸರಿದೂಗಿಸಲು ಕೇಂದ್ರ ಬ್ಯಾಂಕ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಾಯ್ದೆ ತಿದ್ದುಪಡಿ ವಿಧೇಯಕಕ್ಕೂ ಕೂಡ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಾ.31ರ ನಂತರ ವ್ಯಕ್ತಿಯು 500 ರೂ. ಮತ್ತು 1000 ರೂ. ಮುಖಬೆಲೆಯ 10ಕ್ಕಿಂತ ಹೆಚ್ಚು ನೋಟುಗಳನ್ನು ಹೊಂದಿದಲ್ಲಿ ಆತನ ಮೇಲೆ 50 ಸಾವಿರ ರೂ. ವರೆಗೆ ದಂಡ ಅಥವಾ ಕೆಲವು ಪ್ರತ್ಯೇಕ ಸಂದರ್ಭಗಳಲ್ಲಿ 4 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ.
ಮಾ.31ರ ಒಳಗಾಗಿ ಹಳೆ ನೋಟು ಠೇವಣಿ ಮಾಡಲು ಸಾಧ್ಯವಾಗದಿದ್ದಲ್ಲಿ ಸ್ಪಷ್ಟ ಕಾರಣಗಳೊಂದಿಗೆ ಷರತ್ತುಬದ್ಧ ನಿಯಮದ ಮೂಲಕ ಠೇವಣಿ ಮಾಡಬಹುದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಇನ್ನು ಹಳೇ ನಿಷೇಧಿತ ನೋಟು ಹೊಂದಿರುವವರಿಗೆ ಮಾರ್ಚ್ 31ರ ವರೆಗೆ ಆರ್ಬಿಐನಲ್ಲಿ ಠೇವಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಅಕ್ರಮ ಆಸ್ತಿ ಹೊಂದಿದವರು ಮಾ.31, 2017ರ ವರೆಗೆ ಅದನ್ನು ಬಹಿರಂಗ ಪಡಿಸಲು ಸಮಯ ನೀಡಲಾಗಿದ್ದು, ಶೇ.50ರಷ್ಟು ತೆರಿಗೆ ಹಾಗೂ ಮುಂದಿನ ನಾಲ್ಕು ವರ್ಷಗಳಿಗೆ ಶೇ.೨೫ರಷ್ಟು ಹೆಚ್ಚುವರಿ ದಂಡ ಪಾವತಿಸಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.