ಪುದುಚೇರಿ: ಭೃಷ್ಟಾಚಾರ ಕಡಿಮೆ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಕೇಂದ್ರಾಡಳಿತ ಪ್ರದೇಶ ಸರಕಾರ ತನ್ನ ಎಲ್ಲ ಇಲಾಖೆಗಳಿಗೆ ಡಿಜಿಟಲ್ ವ್ಯವಹಾರ ಅಳವಡಿಸಿಕೊಳ್ಳಲು ಆದೇಶ ನೀಡಿದೆ ಎಂದು ಪುದುಚೇರಿ ಗವರ್ನರ್ ಕಿರಣ ಬೇಡಿ ಅವರು ಹೇಳಿದ್ದಾರೆ.
‘ಪದುಚೇರಿಯ ಹಣಕಾಸು ಇಲಾಖೆ ಡಿಜಿಟಲ್ ವ್ಯವಹಾರವನ್ನು ಕಡ್ಡಾಯಗೊಳಿಸಿದ್ದು, ಸರ್ಕಾರ ಭೃಷ್ಟತೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ತೋರಿಸುತ್ತದೆ’ ಎಂದು ಬೇಡಿ ಅವರು ತಮ್ಮ ಟ್ವಿಟರ್ ಸಂದೇಶದಲ್ಲಿ ಹೇಳಿದ್ದಾರೆ.
ಪದುಚೇರಿಯ ಆಯುಕ್ತ ಮತ್ತು ಹಣಕಾಸಿನ ಕಾರ್ಯದರ್ಶಿ ವಿ. ಕಂದವೇಲು ಸರ್ಕಾರಿ ಇಲಾಖೆಯ ಮುಖ್ಯಸ್ಥರಿಗೆ ಇನ್ನು ಮುಂದೆ ನೌಕರರ ಮಾಸಿಕ ವೇತನ ಮತ್ತು ಭತ್ಯೆಯ ಜೊತೆಗೆ ಗುತ್ತಿಗೆದಾರ ಹಾಗೂ ವಸ್ತು ಪೂರೈಕೆದಾರರಿಗೆ ರೂ. 5000 ಮೇಲ್ಪಟ್ಟ ಮೊತ್ತವನ್ನು ಡಿಜಿಟಲ್ ವ್ಯವಹಾರ ಮತ್ತು ಇ-ಬ್ಯಾಂಕಿಂಗ್ ಮೂಲಕವೇ ಪಾವತಿಸಲು ಆದೇಶಿಸಿದ್ದಾರೆ.
ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಇಲಾಖೆಗಳು ಕೂಡ ಫಲಾನುಭವಿಗಳಿಗೆ, ಅಂಗವಿಕಲ, ದುರ್ಬಲ ಮತ್ತು ಹಾಸಿಗೆ ಹಿಡಿದ ಅನಾರೋಗ್ಯ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪಾವತಿಯನ್ನು ಬ್ಯಾಂಕ್ ಖಾತೆಯ ಮೂಲಕ ಪಾವತಿ ಮಾಡಬೇಕು. ನಗದು ವ್ಯವಹಾರವನ್ನೂ ಮುಂದುವರೆಸಲಾಗಿದೆ ಎಂದು ಕಾರ್ಯದರ್ಶಿ ಕಂದವೇಲು ತಿಳಿಸಿದ್ದಾರೆ.
ಡಿಜಿಟಲ್ ಪಾವತಿ ಮಾಡುವ ಆದೇಶವು ಎಲ್ಲ ಸಂಸ್ಥೆಗಳಿಗೆ, ಶಾಸನಬದ್ದ ಸಂಸ್ಥೆಗಳಿಗೆ, ರಾಜ್ಯ ಸರಕಾರ ಪ್ರಾಯೋಜಿತ ಸಾರ್ವಜನಿಕ ವಲಯದ ಉದ್ಯಮಗಳಿಗೆ ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಹಾಗೂ ಇತರೆ ಸ್ವಾಯತ್ತ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ವರದಿಯಾಗಿದೆ.
ಕೇಂದ್ರ ಗೃಹ ಸಚಿವಾಲಯ ಪದುಚೇರಿಯ ಮುಖ್ಯ ಕಾರ್ಯದರ್ಶಿಗೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ನಿರ್ದೇಶಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.