ನವದೆಹಲಿ: ಕಳೆದ 100 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬ್ರಿಟನ್ನ ಆರ್ಥಿಕತೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ. ಪ್ರಸ್ತುತ ಜಿಡಿಪಿ ಆರ್ಥಿಕತೆ ಆಧಾರದಲ್ಲಿ ಅಮೇರಿಕಾ, ಚೀನಾ, ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ನಂತರ 6ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ಇದು ಬ್ರೆಕ್ಸಿಟ್ ನಂತರದ ಯು.ಕೆ.ಯ ಕುಸಿತವಾದರೆ ಭಾರತದ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮೈಲಿಗಲ್ಲಿನ ಸಂಕೇತವಾಗಿದೆ. ಭಾರತದ ಜಿಡಿಪಿ 2017ರಲ್ಲಿ 7.6ರಷ್ಟು ಏರಿಕೆಯಾಗಿಲಿದೆ ಎಂದು ಅಂದಾಜಿಸಲಾಗಿದೆ.
ಯುಕೆಯ ಆರ್ಥಿಕತೆ 2016ರಲ್ಲಿ ಶೇ.1.8ರಷ್ಟು ಹೆಚ್ಚಳ ಆಗಲಿದ್ದು, 2017ರಲ್ಲಿ 1.1ರಷ್ಟು ಮಾತ್ರ ಏರಿಕೆಯಾಗುವ ಬಗ್ಗೆ ನಿರೀಕ್ಷಿಸಲಾಗಿದೆ. ಯುಕೆ ಕಳೆದ ಜೂನ್ನಲ್ಲಿ ಮತದಾನದ ಮೂಲಕ ಯೂರೋಪಿಯನ್ ಒಕ್ಕೂಟದಿಂದ ಹೊರನಡೆಯಲು ಮುಂದಾಗಿದ್ದು, ಅದರ ಲಾಭದಾಯಕ ಸಾಮಾನ್ಯ ಮಾರುಕಟ್ಟೆ ಬಿಟ್ಟ ಬಳಿಕ ಬ್ರಿಟನ್ನ ಆರ್ಥಿಕತೆ ಮತ್ತು ನಗದು ವಹಿವಾಟಿನಲ್ಲಿ ಕುಸಿತ ಕಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.