ನ್ಯೂಯಾರ್ಕ್: ಮಹಾತ್ಮಾ ಗಾಂಧಿ ಅವರು ತಮ್ಮ ಚರಕದ ಮುಂಭಾಗದಲ್ಲಿ ಕುಳಿತಿರುವ ಚಿತ್ರ ಟೈಮ್ಸ್ ಮ್ಯಾಗಜಿನ್ನ ಸಂಕಲನ ‘ವಿಶ್ವವನ್ನೇ ಬದಲಿಸಿದ ಚಿತ್ರಗಳು’ ಸಾರ್ವಕಾಲಿಕ 100 ಅತ್ಯಂತ ಪ್ರಭಾವಶಾಲಿ ಚಿತ್ರಗಳಲ್ಲಿ ಒಂದಾಗಿದೆ.
ಕನ್ನಡಕ ಧರಿಸಿದ ಮಹಾತ್ಮಾ ಗಾಂಧಿ ಅವರು ನೆಲದಲ್ಲಿ ತೆಳುವಾದ ಹಾಸಿಗೆ ಮೇಲೆ ತಮ್ಮ ತಲೆಯನ್ನು ತಗ್ಗಿಸಿ ಪತ್ರಿಕೆಯನ್ನು ಓದುತ್ತಿರುವ ಈ ಕಪ್ಪು-ಬಿಳಿ ಚಿತ್ರವನ್ನು 1946ರಲ್ಲಿ ಮಾರ್ಗರೆಟ್ ಬಾರ್ಕ್- ವೈಟ್ ಅವರು ತೆಗೆದಿದ್ದರು.
ಭಾರತದ ಮಹಾನ್ ನಾಯಕರ ಒಂದು ಲೇಖನಕ್ಕಾಗಿ ಈ ಚಿತ್ರ ತೆಗೆಯಲಾಗಿದ್ದು, ಆದರೆ ಅದರ ಎರಡು ವರ್ಷಗಳ ನಂತರ ಮಹಾತ್ಮಾ ಗಾಂಧಿ ಅವರ ಹತ್ಯೆಯ ಬಳಿಕ ಗೌರವ ಸಲ್ಲಿಕೆಯ ಪ್ರಕಟಣೆಯೊಂದರಲ್ಲಿ ಕಾಣಿಸಿಕೊಂಡಿತ್ತು.
ಇದು ಶೀಘ್ರದಲ್ಲೇ ಒಂದು ಅಳಿಯಲಾಗದ ಚಿತ್ರವಾಗಿ ಹೊರಹೊಮ್ಮಿತು. ನಾಗರಿಕ ಅಸಹಕಾರ ಚಳುವಳಿ ಮತ್ತು ಶಾಂತಿಯ ಪ್ರಚಾರಕ ಗಾಂಧಿ ಅವರ ಯೋಜನೆಗಳು ಉಪಖಂಡದ ಹೊರಗೂ ಸ್ಥಾಪಿನೆಯಾಗಲು ಇದು ಸಹಾಯಕವಾಯಿತು ಎಂದು ಟೈಮ್ಸ್ ಮ್ಯಾಗಜಿನ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.