ನವದೆಹಲಿ: ಸೆಪ್ಟೆಂಬರ್ ತಿಂಗಳಿನಲ್ಲಿ ರಫ್ತು ಬೆಳವಣಿಗೆ ಶೇ. 4.62ರೊಂದಿಗೆ ಅತ್ಯಂತ ಗಮನಾರ್ಹ ಅಭಿವೃದ್ಧಿ ಕಂಡಿತ್ತು. ಇದು ಜಾಗತಿಕ ಬೇಡಿಕೆಯಲ್ಲಿ ಕುಸಿತದ ವಿರುದ್ಧ ಹೋರಾಡುತ್ತಿರುವ ರಫ್ತುದಾರರಲ್ಲಿ ನಿರೀಕ್ಷೆ ಮೂಡಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2 ತಿಂಗಳ ಕುಸಿತದ ಬಳಿಕ ಸೆಪ್ಟೆಂಬರ್ನಲ್ಲಿ 22.9 ಬಿಯನ್ನೊಂದಿಗೆ ಶೇ. 4.62 ರಫ್ತು ಕಂಡಿದೆ. ಇಂಜಿನಿಯರಿಂಗ್, ರತ್ನಗಳು ಮತ್ತು ಆಭರಣ ವಹಿವಾಟಿನಲ್ಲಿ ಹೆಚ್ಚಿನ ರಫ್ತು ಕಂಡಿದೆ ಎಂದು ಅವರು ಹೇಳಿದ್ದಾರೆ.
ಆದ್ದರಿಂದ ಖಂಡಿತವಾಗಿಯೂ ಇದರಲ್ಲಿ ಭರವಸೆ ಇದೆ. ಈ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುವ ರಫ್ತುದಾರಲ್ಲಿ ನಿರೀಕ್ಷೆ ಮೂಡಿಸಿದೆ ಎಂದು ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಉತ್ಸವ ಉದ್ಘಾಟಿಸುತ್ತ ಸೀತಾರಾಮನ್ ಹೇಳಿದ್ದಾರೆ.
ಸರ್ಕಾರದ ಹೊಸ ನೀತಿಗಳಿಂದಾಗಿ ೨೦೧೬-೧೭ನೇ ಸಾಲಿನಲ್ಲಿ ದೇಶದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಶೇ.30ರಂತೆ 21.62 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದು ಭಾರತವನ್ನು ‘ಶೈನಿಂಗ್ ಸ್ಟಾರ್’ ಆಗಿ ಬಣ್ಣಿಸಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.