ಪುಣೆ : 2016 ರ ಮಕ್ಕಳ ದಿನಾಚರಣೆ ಗೂಗಲ್ ಡೂಡಲ್ ಪುಣೆಯ 11 ವರ್ಷದ ಅನ್ವಿತಾ ಪ್ರಶಾಂತ್ ತೆಲಾಂಗ ಸಿದ್ಧಪಡಿಸಿದ ಚಿತ್ರ.
ಇತ್ತೀಚೆಗಷ್ಟೆ ಅಂತರ್ಜಾಲ ದೈತ್ಯ ಗೂಗಲ್ ನಡೆಸಿದ ರಾಷ್ಟ್ರೀಯ ಮಟ್ಟದ ’ಡೂಡಲ್ 4 ಗೂಗಲ್’ ಸ್ಪರ್ಧೆಯಲ್ಲಿ ಭಾರತದ ಪುಣೆಯ 11 ವರ್ಷದ ಅನ್ವಿತಾ ಪ್ರಶಾಂತ್ ತೆಲಾಂಗ್ ಸಿದ್ಧಪಡಿಸಿದ ’ಲಿವ್ ಇನ್ ದ ಪ್ರೆಸೆಂಟ್’ ಶೀರ್ಷಿಕೆಯ ಡೂಡಲ್ ಗೆದ್ದ ಚಿತ್ರಣವೇ ಇಂದಿನ ಗೂಗಲ್ ಡೂಡಲ್.
ಈ ವರ್ಷದ ಡೂಡಲ್ ಪರಿಕಲ್ಪನೆಯು If I could teach anyone anything, it would be’. ಆಗಿತ್ತು. ಹಾಗೂ ಗೆದ್ದ ಡೂಡಲ್ನ್ನು ಮಕ್ಕಳ ದಿನಾಚರಣೆಯಾದ ನವೆಂಬರ್ 14 ರಂದು ಗೂಗಲ್ ಇಂಡಿಯಾ ಮುಖಪುಟದಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಲಾಗಿತ್ತು. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಅನ್ವಿತಾ ಡೂಡಲ್ ಪರಿಕಲ್ಪನೆಗೆ ತಕ್ಕಂತೆ ‘Live in the present’. ಎಂಬ ಶೀರ್ಷಿಕೆಯ ಡೂಡಲ್ ಚಿತ್ರಿಸಿದಳು. ಸುಮಾರು 50 ಮಕ್ಕಳು ವಿವಿಧ ನಗರಗಳಿಂದ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಅನ್ವಿತಾ ಚಿತ್ರಣ ಗೂಗಲ್ ಮೆಚ್ಚುಗೆ ಪಡೆದು ಇಂದು ಗೂಗಲ್ ಡೂಡಲ್ ಆಗಿ ಪ್ರದರ್ಶಿಸಲ್ಪಟ್ಟಿದೆ.
’ಅನ್ವಿತಾ 11 ವರ್ಷದವಳಾಗಿದ್ದರೂ, ಕೆಲವೊಮ್ಮೆ ಅವಳ ತಾತ್ವಿಕವಾದ ಉತ್ತರಗಳನ್ನು ಕೇಳಿ ನನಗೆ ಆಶ್ಚರ್ಯವಾಗುತ್ತದೆ. ಕೆಲವೊಮ್ಮೆ ನಮ್ಮ ಕಚೇರಿಯಲ್ಲಿ ನಡೆದಿರುವುದನ್ನು ಹೇಳುವಾಗ ಅವಳ ಪ್ರತ್ಯುತ್ತರಗಳು ತುಂಬ ಪಕ್ವವಾಗಿಯೂ ಹಾಗೂ ಭಿನ್ನವಾಗಿರುತ್ತವೆ.’ ಎಂದು ಅನ್ವಿತಾ ತಾಯಿ ಅಪರ್ಣಾ ಹೇಳುತ್ತಾರೆ.
ಅನ್ವಿತಾ ಹೇಳುವ ಪ್ರಕಾರ, ‘ಜಗತ್ತು ತುಂಬ ವೇಗವಾಗಿ ಚಲಿಸುತ್ತಿದೆ, ಪ್ರಕೃತಿ ಹಾಗೂ ಜೀವನದಲ್ಲಿನ ಸಣ್ಣ ಸಣ್ಣ ಸಂಗತಿಗಳನ್ನು ನಾವು ಆನಂದಿಸಬೇಕು. ನಾನು ಚಿತ್ರಿಸಿದ ಡೂಡಲ್ನಲ್ಲಿ ಇದನ್ನೇ ತೋರಿಸಲು ಪ್ರಯತ್ನಿಸಿದ್ದೇನೆ. ನಾನು ವರ್ತಮಾನದಲ್ಲಿ ಜೀವಿಸಲು ಇಷ್ಟಪಡುತ್ತೇನೆ ಹಾಗೂ ಬೇರೆ ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ’ ಎಂದು ಹೇಳಿದ್ದಾಳೆ.
ಒಂದು ಉತ್ತಮ ಜಗತ್ತು ಮತ್ತು ಆರೋಗ್ಯಕರ ಜೀವನಶೈಲಿ ನಿರ್ಮಿಸುವಲ್ಲಿ ಅನ್ವಿತಾಳ ಸೃಜನಶೀಲತೆ ಹಾಗೂ ದೂರದೃಷ್ಟಿ ಪ್ರತಿಬಿಂಬಿಸುತ್ತದೆ ಎಂದು ಗೂಗಲ್ ಅಧಿಕೃತವಾಗಿ ಹೇಳಿದೆ. ಪ್ರತಿಯೊಬ್ಬರು ಜೀವನವನ್ನು ಹೇಗೆ ಆನಂದಿಸಬೇಕು ಮತ್ತು ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಪ್ರಶಂಸಿಸುತ್ತಾ ಒತ್ತಡವಿಲ್ಲದೆ ಜೀವಿಸಬೇಕೆಂಬುದನ್ನು ಅವಳು ತಯಾರಿಸಿದ ಡೂಡಲ್ನಲ್ಲಿ ಪ್ರದರ್ಶಿಸಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.