ನವದೆಹಲಿ: ಜಪಾನ್ನ ಟೊಕಿಯೊದಲ್ಲಿ ನಡೆಯಲಿರುವ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಪ್ರವಾಸದಲ್ಲಿ ಪ್ರಧಾನಮಂತ್ರಿಯವರು ಹಲವಾರು ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು ಭಾರತದ ಅಭಿವೃದ್ದಿಗೆ ಸಹಾಯಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಪೂರ್ವ ಏಷ್ಯಾ ಪ್ರವಾಸ ಆರಂಭಗೊಂಡಿದ್ದು, ಈ ಬಾರಿ ಜಪಾನ್ ಜೊತೆ ಶೃಂಗಸಭೆ ನಡೆಯಲಿದೆ. ಪ್ರಧಾನಿ ಮೋದಿ ಅವರು ಜಪಾನ್ಗೆ ತೆರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಹೈ-ಸ್ಪೀಡ್ ರೈಲ್ವೆ ಸಹಕಾರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸಲಿದೆ. ಭಾರತ-ಜಪಾನ್ ನಡುವಿನ ಹೈ-ಸ್ಪೀಡ್ ರೈಲ್ವೆ ಸಹಕಾರ ನಮ್ಮ ಸಹಕಾರ ಶಕ್ತಿಯ ಒಂದು ಉಜ್ಷಲ ಉದಾಹರಣೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದು ಕೇವಲ ವ್ಯಾಪಾರ ಮತ್ತು ಹೂಡಿಕೆಯನ್ನು ವೃದ್ಧಿಸುವುದಲ್ಲದೇ ಭಾರತದಲ್ಲಿ ನುರಿತ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಿದೆ ಹಾಗೂ ‘ಮೇಕ್ ಇನ್ ಇಂಡಿಯಾ’ ಮಿಷನ್ಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ನವೆಂಬರ್ 12ರಂದು ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿನ್ಜೋ ಅಬೆ ಅವರು ಮುಂಬಯಿ-ಅಹ್ಮದಾಬಾದ್ ಹೈ-ಸ್ಪೀಡ್ ರೈಲ್ವೆ ತಂತ್ರಜ್ಞಾನ ನಿಯೋಜನೆಯ ‘ಕವಾಸಕಿ ಹೆವಿ ಇಂಡಸ್ಟ್ರೀಜ್’ ಕಂಪನಿಯೊಂದಕ್ಕೆ ಭೇಟಿ ನೀಡಲಿದ್ದಾರೆ. ಪ್ರಸಿದ್ಧ ಶಿಂಕಾನ್ಸೆನ್ನ ಕೋಬೆಗೆ ಭೇಟಿ ನೀಡಲಿದ್ದಾರೆ.
ಜಪಾನ ಜೊತೆಗಿನ ನಮ್ಮ ಸಂಬಂಧವು ತುಂಬ ವಿಶೇಷವಾಗಿದೆ. ಜಪಾನ ಹಾಗೂ ಭಾರತ ದೇಶಗಳು ಬೌದ್ಧ ಪರಂಪರೆ, ಪ್ರಜಾಪ್ರಭುತ್ವ ಹಾಗೂ ತತ್ವ-ಆಧಾರಿತ ಮೌಲ್ಯಗಳಿಗೆ ಜಾಗತಿಕವಾಗಿ ಬದ್ಧವಾಗಿವೆ, ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.
ಭೇಟಿಯ ವೇಳೆಯಲ್ಲಿ ಎರಡೂ ದೇಶಗಳು ನಾಗರಿಕ ಪರಮಾಣು ಒಂಪದ್ದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ ಹಾಗೂ ಇದರ ಜೊತೆಯಲ್ಲಿ ವ್ಯಾಪಾರ, ಹೂಡಿಕೆ ಮತ್ತು ಸುರಕ್ಷತೆಯಂತಹ ಸಹಕಾರಿ ವಲಯಗಳ ಬಗ್ಗೆಯೂ ಚರ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.