ನವದೆಹಲಿ: ಬ್ರೆಕ್ಸಿಟ್ ಕೊನೆಗೊಂಡ ಬಳಿಕ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿರುವ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದರೊಂದಿಗೆ ಯುಕೆ ಮುಕ್ತ ವ್ಯಾಪಾರ ಚಾಂಪಿಯನ್ ಆಗಲಿದೆ ಎಂದು ತೆರೆಸಾ ಮೇ ಹೇಳಿದ್ದಾರೆ.
ಈ ನಡುವೆ ಭಾರತ ಸರ್ಕಾರ ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಬ್ರಿಟನ್ ಪ್ರಯಾಣಕ್ಕೆ ವೀಸಾ ನೀಡುವ ಬಗ್ಗೆ ಹೆಚ್ಚಿನ ಆಶಯ ಹೊಂದಿದೆ. ಬರಿಟನ್ ಪ್ರಧಾನಿ ತೆರೆಸಾ ಮೇ ಅವರು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಭಾರತೀಯ ವ್ಯಾಪಾರಸ್ಥರು, ಉದ್ಯೋಗಿಗಳಿಗೆ ಮಾತ್ರ ವೀಸಾ ಸೌಲಭ್ಯ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಬ್ರಿಟನ್ನ ವ್ಯಾಪಾರ ಒಪ್ಪಂದ ಭಾರತಕ್ಕೆ ಬೃಹತ್ ವ್ಯಾಪಾರ ಮಾರುಕಟ್ಟೆಯಲ್ಲಿ ಚೌಕಾಸಿ ಮಾಡುವ ಅವಕಾಶವನ್ನು ನೀಡಲಿದೆ.
ಮುಕ್ತ ವ್ಯಾಪಾರದಲ್ಲಿ ಜಾಗತಿಕ ನಾಯಕತ್ವ ಹೊಂದಲು ಬ್ರಿಟನ್ ಬಯಸಿದೆ. ಭಾರತದೊಂದಿಗಿನ ಭೇಟಿ ವ್ಯಾಪಾರ ಅಡೆತಡೆಗಳನ್ನು ತಗ್ಗಿಸಲಿದೆ ಎಂದು ಮೇ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳ ವೀಸಾ ನಿರ್ಬಂಧಗಳಿಂದ ತಮ್ಮ ಶಿಕ್ಷಣದ ನಂತರ ಬ್ರಿಟನ್ನಲ್ಲಿ ಉಳಿದುಕೊಳ್ಳಲು ಬಯಸುವ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣದಲ್ಲಿ ಶೇ.50ರಷ್ಟು ಇಳಿಕೆಯಾಗಿದೆ. ಇದು ದೆಹಲಿ ವಿದ್ಯಾರ್ಥಿಗಳ ನಿರಾಶೆಗೆ ಕಾರಣವಾಗಿದೆ.
ಸೇಮ್-ಡೇ ವೀಸಾಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ನೀಡುವ ಮೂಲಕ ಬ್ರಿಟನ್ ಸರ್ಕಾರ ಈಗಾಗಲೇ ಭಾರತೀಯರಿಗೆ ವಿಶೇಷ ಸ್ಥಾನಮಾನ ನೀಡಿದೆ. ಭಾರತೀಯ ವ್ಯಾಪಾರಸ್ಥರಿಗೆ ಕಸ್ಟಮ್ಸ್ ಮೂಲಕ ಟ್ರ್ಯಾಕಿಂಗ್ ವ್ಯವಸ್ಥೆ ಜೊತೆ ಹೊಸ ‘ನೋಂದಾಯಿತ ಪ್ರಯಾಣ ದರ’ ಯೋಜನೆಯನ್ನು ತಂದಿದೆ ಎಂದು ತೆರೆಸಾ ಮೇ ಹೇಳಿದ್ದಾರೆ.
ಭಾರತ ಮತ್ಯು ಬ್ರಿಟನ್ 21ನೇ ಶತಮಾನದ ನೂತನ ಮಾದರಿಯಲ್ಲಿ ಕಾರ್ಯ ನಿರ್ವಹಿಸುವುದು ಮುಖ್ಯ. ಭಾರತದ ‘100 ಸ್ಮಾರ್ಟ್ ಸಿಟಿ’ಗಳತಹ ಇತರ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಳ್ಳುವಂತೆ ಬ್ರಿಟನ್ ಪಾಲುದಾರರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನಿಸಿದ್ದಾರೆ.
2010ರಿಂದ ಬ್ರಿಟನ್ನಲ್ಲಿ ಅಧ್ಯಯನ ನಡೆಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡು ಬಂದಿದ್ದು, ಶೈಕ್ಷಣಿಕ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಯುವಕರ ಹೆಚ್ಚಿನ ಚಲನಶೀಲತೆ ಮತ್ತು ಭಾಗವಹಿಸುವಿಕೆ ಅಗತ್ಯ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.