ಲುಧಿಯಾನ : ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 18 ರಂದು 500 ಸಾಂಪ್ರದಾಯಿಕ ಚರಕ (ಮರದಿಂದ ತಯಾರು ಮಾಡಲ್ಪಟ್ಟಿದ್ದು)ಗಳನ್ನು ಲುಧಿಯಾನದ ಸುತ್ತಮುತ್ತಲಿನ 5 ಖಾದಿ ಸಂಸ್ಥೆಗಳ ಮಹಿಳೆಯರಿಗೆ ವಿತರಿಸಲಿದ್ದಾರೆ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC) ವು ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಕೆ. ಕಾಮರಾಜ್ ಅವರ ಹಾದಿಯನ್ನು ಅನುಸರಿಸಿ ಸ್ಥಳೀಯ 5 ಖಾದಿ ಸಂಸ್ಥೆಗಳ ಮಹಿಳೆಯರಿಗೆ 500 ಸಾಂಪ್ರದಾಯಿಕ ಚರಕಗಳನ್ನು ನೀಡಲು ಮುಂದಾಗಿದೆ.
ಪಂಜಾಬ್ನ ವಿವಿಧ ಭಾಗಗಳಿಂದ ಚರಕದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಆರಿಸಲಾಗಿದೆ. ಈ 500 ಚರಕಗಳು 500 ರಷ್ಟೇ ನೇರ ಉದ್ಯೋಗವನ್ನು ತಮ್ಮ ಮನೆಯಿಂದಲೇ ಪಡೆದುಕೊಳ್ಳುವಂತೆ ಮಾಡಲಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾದ ವಿ. ಕೆ. ಸಕ್ಸೇನಾ ಅವರು ಹೇಳಿದರು.
1945 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ. ಕಾಮರಾಜ್ ಅವರು ತಮಿಳುನಾಡಿನಲ್ಲಿ 500 ಸಾಂಪ್ರದಾಯಿಕ ಚರಕಗಳನ್ನು ಅಲ್ಲಿನ ಸ್ಥಳೀಯ ಮಹಿಳೆಯರಿಗೆ ಚರಕ ಮೇಳದ ಸಂದರ್ಭ ನೀಡಿದ್ದರು. ಅವರ ಹಾದಿಯಲ್ಲೇ ನಾವು ನಡೆಯಲಿದ್ದೇವೆ ಎಂದು KVIC ಅಧ್ಯಕ್ಷ ವಿ.ಕೆ. ಸಕ್ಸೇನಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.