ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಸೀಮಿತ ದಾಳಿ ಕುರಿತು ಸಾಕ್ಷಿಗಳನ್ನು ನೀಡುವ ಮತ್ತು ಪಾಕಿಸ್ಥಾನ ಕಲಾವಿದರನ್ನು ನಿಷೇಧಿಸುವ ಬಗ್ಗೆ ಜನರ ಕಿತ್ತಾಟದ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟೀಕಿಸಿದ್ದಾರೆ.
ಭಾರತೀಯ ನಾಗರಿಕರಾಗಿ ನಾವು ನಮ್ಮೊಳಗಿನ ಹೋರಾಟವನ್ನು ನಿಲ್ಲಿಸಬೇಕು ಹಾಗೂ ನಮ್ಮ ರಕ್ಷಣೆಗಾಗಿ ಜೀವನ ತ್ಯಾಗ ಮಾಡಿದ ಯೋಧರ ಬಗ್ಗೆ ಚಿಂತಿಸಬೇಕು. ತಮ್ಮ ಮನೆಯ ಓರ್ವ ಸದಸ್ಯರನ್ನು ಕಳೆದುಕೊಂಡಿರುವ ಹುತಾತ್ಮ ಯೋಧರ ಕುಟುಂಬಗಳ ಬಗ್ಗೆ ಆಲೋಚಿಸಬೇಕು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇದೇ ವೇಳೆ ಅವರು ಬಾರಾಮುಲ್ಲಾದ ಉಗ್ರ ದಾಳಿಗೆ ಬಲಿಯಾದ ಹತಾತ್ಮ ನಿತಿನ್ ಕುಮಾರ್ ಹಾಗೂ ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾದ 19 ಸೈನಿಕರನ್ನು ಸ್ಮರಿಸಿದ್ದಾರೆ.
ಸೀಮಿತ ದಾಳಿ, ಪಾಕ್ ಕಲಕಾವಿದರ ವಿಚಾರವನ್ನು ರಾಜಕೀಯಗೊಳಿಸುವುದರ ಬದಲು ದೇಶದ ಸೈನಿಕರ ಭವಿಷ್ಯದ ಕುರಿತು ಗಮನ ಹರಿಸಲು ಇದು ಸೂಕ್ತ ಸಮಯವಾಗಿದೆ. ನಮ್ಮ ಉಳಿವಿಗೆ ಅವರು ಕಾರಣರು ಎಂಬುದನ್ನು ನಾವು ಮರೆಯಬಾರದು ಎಂದು ಓರ್ವ ಸೇನಾಧಿಕಾರಿಯ ಪುತ್ರನಾಗಿರುವ ಅಕ್ಷಯ್ ಕುಮಾರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತು ಪುರಾವೆ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೋರಿದ್ದರು. ಅಲ್ಲದೇ ಪಾಕಿಸ್ಥಾನಿ ಕಲಾವಿದರನ್ನು ಎಂಎನ್ಎಸ್ ನಿಷೇಧಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.