ಖ್ಯಾಂಟಿ ಮ್ಯಾನ್ಸಿಕ್: ರಷ್ಯಾದ ಖ್ಯಾಂಟಿ ಮ್ಯಾನ್ಸಿಕ್ನಲ್ಲಿ ನಡೆದ ವಿಶ್ವ ಯುವ ಚೆಸ್ ಚಾಂಪಿಯ್ಶಿಪ್ನಲ್ಲಿ ಭಾರತದ ಅಕಾಂಕ್ಷಾ ಹಂಗವನೆ U-16 ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
11 ಪಂದ್ಯಗಳಿಂದ 9 ಅಂಕಗಳನ್ನು ಪಡೆದಿರುವ ಅಕಾಂಕ್ಷಾ, ಫೈನಲ್ನಲ್ಲಿ ಪೊಲ್ಯಾಂಡ್ನ ಅಲಿಕಾ ಸ್ಲಿವಿಕಾ ವಿರುದ್ಧ ಜಯ ಸಾಧಿಸಿದ್ದಾರೆ.
ಇರಾನ್ನ ಮೊಬಿನಾ ಅಲಿನಸಾಬ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇನ್ನೋರ್ವ ಯುವ ಆಟಗಾರ್ತಿ ಪೊಲಿನಾ ಶಿವಲೋವಾ ತೃತೀಯ ಹಾಗೂ ನೆದರ್ಲ್ಯಾಂಡ್ನ ಅನ್ನಾ ಮಾಝಾ ಕಾಜಾರಿಯಾ ನಾಲ್ಕನೇ ಸ್ಥಾನ ಪಡೆದಿದ್ದಾರೆ.
15ರ ಹರೆಯದ ಅಕಾಂಕ್ಷಾ ಕೊಲೊಂಬೋದಲ್ಲಿ ನಡೆದ U-16 ಕಾಮನ್ವೆಲ್ತ್ ಚಾಂಪಿಯನ್ಶಿಪ್ನಲ್ಲೂ ಚಿನ್ನದ ಪದಕ ಗೆದ್ದುಕೊಂಡಿದ್ದರು.
ನಾನು ಮೊದಲ ಬಾರಿ ವಿಶ್ವ ಚಾಂಪಿಯನ್ಶಿಪ್ ಪದಕ ಗೆದ್ದುಕೊಂಡಸಿದ್ದು, ಬಗಳ ಸಂತಸ ತಂದಿದೆ. ಮುಖ್ಯ ಕೋಚ್ ಅನುಪಸ್ಥಿತಿಯಲ್ಲಿ ನಿಯೋಗದ ಮತ್ತೋರ್ವ ಕೋಚ್ ಸಹಾಯದಿಂದ ತರಬೇತಿ ಪಡೆದುಕೊಂಡಿದ್ದೆ ಎಂದು ಅಕಾಂಕ್ಷಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.