ಈ ಅರವಿಂದ ಕೇಜ್ರಿವಾಲ್ ಹೆಸರು ಯಾವಾಗ ತಿರುವು ಮುರುವು ಆಗುತ್ತೋ?
ಇದ್ದಕ್ಕಿದ್ದಂತೆ ದೆಹಲಿ ಮುಖ್ಯಮಂತ್ರಿಗೆ ಪಾಕಿಸ್ಥಾನದ ನೆಲೆಯೊಳಗೆ ನುಗ್ಗಿ ಅಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಸೇನಾ ಕಾರ್ಯಾಚರಣೆ ಮೇಲೆಯೇ ಅನುಮಾನ ಬಂದಿದೆ. ಅದನ್ನು ಅವರು ನೇರವಾಗಿ ಹೇಳುವ ಧೈರ್ಯ ಮಾಡಿಲ್ಲ.
ಪಾಕಿಸ್ಥಾನಕ್ಕೆ ಅನುಮಾನ ಬಂದಿದೆ, ಅಂಥದ್ದೆಲ್ಲ ಬಾರದಂತೆ ಸರ್ಕಾರವೇ ಸರಿಪಡಿಸಬೇಕು ಎಂದು ಪ್ರಧಾನಿಗೆ ನೇರ ಸಂದೇಶವನ್ನೂ ಕೊಟ್ಟಿದ್ದಾರೆ.
ಮೊನ್ನೆ ಸರ್ಜಿಕಲ್ ಸ್ಟ್ರೈಕ್ ಆದ ಬಳಿಕ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಸೇನಾ ಕಾರ್ಯಾಚರಣೆ ಬಗ್ಗೆ ಪ್ರಶಂಸೆಯ ಸುರಿಮಳೆಯೇ ವ್ಯಕ್ತವಾಗಿತ್ತು. ಹಾಗೇ ಆಗಬೇಕು ಎಂಬ ಭಾವ ಸಹಜವಾಗಿಯೇ ಭಾರತೀಯರಾದವರಲ್ಲಿತ್ತು. ಅದು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಸಂದಿತು.
ಅಲ್ಲೇ ಆದದ್ದು ಆಪತ್ತು. ಯಾವಾಗ ಇಡೀ ಕಾರ್ಯಾಚರಣೆ ಹಿಂದೆ ಮೋದಿ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ ಎಂದು ಊರಿಡೀ ಗೊತ್ತಾಯಿತೋ ಅಂದಿನಿಂದ ಕೇಜ್ರಿವಾಲ್ ಅಕ್ಷರಶಃ ಚಡಪಡಿಸತೊಡಗಿದರು. ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೇಜ್ರಿವಾಲ್ ಅಂಥವರಿಗೆ ಇದ್ದಕ್ಕಿದ್ದಂತೆ ಯುದ್ಧ ಇತ್ಯಾದಿಗಳ ಬಗ್ಗೆ ಸ್ಮಶಾನ ವೈರಾಗ್ಯ ಬರತೊಡಗಿತ್ತು. ಆದರೆ ನೇರವಾಗಿ ಹೇಳುವಂತಿರಲಿಲ್ಲ.
ಕೊನೆಗೂ ಕೇಜ್ರಿವಾಲ್ ಮೌನ ಮುರಿದರು. ಸೋಮವಾರ ವೀಡಿಯೋ ಒಂದನ್ನು ಮಾಡಿ ಪ್ರಧಾನಿಗೆ ಕೊಟ್ಟರು. ಅದರಲ್ಲಿ ಭಾರತೀಯ ಸೇನೆಯನ್ನು ಕೊಂಡಾಡಿದರು. ಪ್ರಧಾನಮಂತ್ರಿಗೂ ನನಗೂ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಕಾರ್ಯಾಚರಣೆಯನ್ನು ಪ್ರಶಂಸಿಸುತ್ತೇನೆ ಎಂದು ಬಾಯ್ತುಂಬಾ ಹೊಗಳಿದರು. ಇದರ ಮಧ್ಯೆ ಒಂದು ಮಾತನ್ನು ಅವರು ಸೇರಿಸಿದರು.
‘ನೋಡಿ ಮೋದಿಯವರೇ, ಪಾಕಿಸ್ಥಾನ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅದರ ಮುಖವಾಡವನ್ನು ನೀವು ಕಳಚಬೇಕು. ಕೆಲವು ಪತ್ರಕರ್ತರನ್ನು ಕರೆದುಕೊಂಡು ಹೋಗಿ ಅಲ್ಲಿನ ಸ್ಥಿತಿಗತಿಗಳನ್ನು ತೋರಿಸುತ್ತಿದೆಯಂತೆ ಇದರಿಂದ ಅಂತಾರಾಷ್ಟ್ರೀಯವಾಗಿ ನಮ್ಮ ಮಾನ ಹರಾಜಾಗಬಾರದಲ್ವೇ ’
ಮೇಲ್ನೋಟಕ್ಕೆ ಕೇಜ್ರಿವಾಲ್ ಪ್ರಧಾನಿಯನ್ನು ಹೊಗಳಿದಂತೆ ಕಂಡರೂ ಆಂತರ್ಯದಲ್ಲಿ ಪಾಕಿಸ್ಥಾನ ಹೇಳಿದ್ದಕ್ಕೂ ಕೇಜ್ರಿವಾಲ್ ಹೇಳಿದ್ದಕ್ಕೂ ಹೆಚ್ಚು ವ್ಯತ್ಯಾಸವೇನೂ ಕಾಣಲಿಲ್ಲ. ಪಾಕಿಸ್ಥಾನ ಹಾಗೆಲ್ಲ ಹೇಳುತ್ತಿದೆ, ಪ್ರಧಾನಿಯವರೇ ನೀವು ಯಾವುದಕ್ಕೂ ಕ್ಯಾರ್ ಮಾಡಬೇಡಿ, ನಾನಿದ್ದೇನೆ ಎಂದು ಹೇಳುವುದನ್ನು ಬಿಟ್ಟು, ನೋಡಿ ಪಾಕಿಸ್ಥಾನ ನಮ್ಮ ವಿರುದ್ಧ ಆಪಾದನೆ ಮಾಡುತ್ತಿದೆ, ನೀವು ಅಲ್ಲ ಎಂದು ಸಾಬೀತುಪಡಿಸಿ ಎಂದರೆ ಹೇಗೆ?
ಸರಿಯಾಗಿ ಇದೇ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕರೂ ಇಂಥದ್ದೇ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಚಿದಂಬರಂ, ಸಂಜಯ್ ನಿರುಪಮ್ರಂಥವರೂ ಮೇಲ್ನೋಟಕ್ಕೆ ಭಾರತದ ಸೈನಿಕರ ಶೌರ್ಯವನ್ನು ಹೊಗಳಿದರೂ ಪಾಕಿಸ್ಥಾನ ಮಾತನಾಡುವಂತೆ ಹೇಳಿಕೆ ನೀಡಲು ಆರಂಭಿಸಿದರು.
ಸಹಜವಾಗಿಯೇ ಇದರ ದುರ್ಲಾಭ ಪಾಕಿಸ್ಥಾನ ಪಡೆದುಕೊಂಡಿದೆ. ಮಂಗಳವಾರ ಪಾಕಿಸ್ಥಾನದ ಬೆಳಗ್ಗಿನ ಪತ್ರಿಕೆಗಳಲ್ಲಿ ಕೇಜ್ರಿವಾಲ್ ಹೀರೋ ಆದರು.
ಪಾಕಿಸ್ಥಾನ ಹೇಳಬೇಕಾದದ್ದನ್ನೆಲ್ಲ ಕೇಜ್ರಿವಾಲ್ ಹೇಳಿದರೆ ಹೇಗೆ? ಯಾರದ್ದು ಸುಳ್ಳು ಪ್ರಚಾರ? ದೆಹಲಿ ಮುಖ್ಯಮಂತ್ರಿ ಮನಸ್ಸಿನಲ್ಲಿ ಇರುವುದಾದರೂ ಏನು ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.