ಬೆಂಗಳೂರು : ಬೆಂಗಳೂರಿನಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ತಪಸ್ – ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ 30-40 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತವಾಗಿ ಪಿಯುಸಿ ಶಿಕ್ಷಣ ಮತ್ತು ಐ.ಐ.ಟಿ. ಪ್ರವೇಶ ನೀಡುತ್ತದೆ. ಅಲ್ಲದೇ ಉಚಿತ ಊಟ ಮತ್ತು ವಸತಿಯನ್ನು ವಿದ್ಯಾರ್ಥಿ ನಿಲಯದಲ್ಲಿ ಕಲ್ಪಿಸುತ್ತದೆ.
ಉಚಿತ ವಿದ್ಯಾರ್ಥಿ ನಿಲಯ: ಕ್ಷೇಮಕರ, ಸ್ವಚ್ಛ ಮತ್ತು ಆರೋಗ್ಯದಾಯಕ ಸಸ್ಯಾಹಾರಿ ಆಹಾರವನ್ನು ಉಚಿತವಾಗಿ ಒದಗಿಸಲಾಗುತ್ತದೆ.
ಸೌಕರ್ಯ: ತರಗತಿಗಳು, ಪ್ರಯೋಗಾಲಯಗಳು ಮತ್ತು ಸುಸಜ್ಜಿತ ಗ್ರಂಥಾಲಯ ಉತ್ತಮವಾಗಿ ವಿನ್ಯಾಸಗೊಂಡಿದೆ ಮತ್ತು ಕಠಿಣ ಪರಿಶ್ರಮದಿಂದ ಶ್ರೇಷ್ಠರೆನಿಸಲು ಸ್ಫೂರ್ತಿ ನೀಡುವಂತಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಒದಗಿಸಲಾಗುವುದು. ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನ ಮತ್ತು ಬೇಸ್ನ ನುರಿತ ಉಪನ್ಯಾಸಕರುಗಳು ತರಬೇತಿ ನೀಡುತ್ತಾರೆ.
ಈ ವಿದ್ಯಾರ್ಥಿಗಳಿಗೆ IIT ಪ್ರವೇಶ ಪರೀಕ್ಷೆಯ ತಯಾರಿ ನಡೆಸಲು ತರಬೇತಿ ನೀಡುವುದರ ಮೂಲಕ ಬೇಸ್ ಸಹಕರಿಸುತ್ತದೆ.
ಅರ್ಹತೆಗಳು
• ಪ್ರಸ್ತುತ ಸಾಲಿನಲ್ಲಿ SSLC/10ನೇ ತರಗತಿಯ ಪರೀಕ್ಷೆ ಬರೆಯುವವರಾಗಿರಬೇಕು.
• 9ನೇ ತರಗತಿ ಅಂತಿಮ ಪರೀಕ್ಷೆಗಳಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
• ಪೋಷಕರ ವಾರ್ಷಿಕ ವರಮಾನ ರೂ. 1,50,000 (ಒಂದು ಲಕ್ಷ ಐವತ್ತು ಸಾವಿರ) ಮೀರಿರಬಾರದು.
• ಆಯ್ಕೆಯಾದರೆ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬೆಂಗಳೂರಿಗೆ ತೆರಳಲು ಸಿದ್ಧರಿರಬೇಕು.
• ’ತಪಸ್’ ಪ್ರಕಲ್ಪ ಬಾಲಕ ವಿದ್ಯಾರ್ಥಿಗಳಿಗೆ ಮಾತ್ರ
ಆಯ್ಕೆ ವಿಧಾನ
• ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುವುದು
• ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ಕೆಲವು ನಗರಗಳಲ್ಲಿ ಏಕಕಾಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು
ಪರೀಕ್ಷಾ ದಿನಾಂಕ : 25 ಡಿಸೆಂಬರ್, 2016
ಆಯ್ಕೆ ಪರೀಕ್ಷೆಗೆ ಯಾವುದೇ ಶುಲ್ಕವಿರುವುದಿಲ್ಲ
ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಮೌಖಿಕ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ನೀಡಲಾಗುವುದು
ಅರ್ಜಿ ಸಲ್ಲಿಕೆ ಹೇಗೆ?
ವಿದ್ಯಾರ್ಥಿಗಳು ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ತಪಸ್ನ ಅಂತರ್ಜಾಲ ತಾಣ www.tapasedu.org ಭೇಟಿ ಕೊಟ್ಟು ಡೌನ್ಲೋಡ್ ಮಾಡಿಕೊಂಡು ಅವಶ್ಯಕ ವಿವರಗಳನ್ನು ಭರ್ತಿ ಮಾಡಿ ಮುಖ್ಯೋಪಾಧ್ಯಯರ ಸಹಿ ಪಡೆದು ತಪಸ್ ಪ್ರಕಲ್ಪಕ್ಕೆ ಕಳುಹಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 30, 2016 (ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಅಂತರ್ಜಾಲವನ್ನು ತಪ್ಪದೇ ನೋಡುವುದು.)
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಸಂಯೋಜಕರು, ‘ತಪಸ್’ ಪ್ರಕಲ್ಪ
ರಾಷ್ಟ್ರೋತ್ಥಾನ ಪರಿಷತ್ ಕೇಶವಶಿಲ್ಪ ಕೆಂಪೇಗೌಡನಗರ, ಬೆಂಗಳೂರು-560019
ದೂರವಾಣಿ: 080-26612652, 94812 01144
ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ವೆಬ್ಸೈಟ್ www.tapasedu.org ನಲ್ಲಿ ಪ್ರಕಟಿಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.