ಪಣಜಿ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಶುಕ್ರವಾರ ಐಸಿಜಿಎಸ್ ಸಾರಥಿ ನೌಕಾಯಾನಕ್ಕೆ ಚಾಲನೆ ನೀಡಲಿದ್ದಾರೆ.
ಕೋಸ್ಟ್ ಗಾರ್ಡ್ ನಿರ್ದೇಶಕ ಜನರಲ್ ರಾಜೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ನೌಕಾಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ವಾಸ್ಕೋ ಆಧಾರಿತ ಗೋವಾ ಶಿಪ್ಯಾರ್ಡ್ ಲಿಮಿಟೆಡ್ನಿಂದ ದೇಶೀಯವಾಗಿ ತಯಾರಿಸಲ್ಪಟ್ಟ ಸಾರಥಿ ವರ್ಗಕ್ಕೆ ಸೇರಿದ ಮೂರನೇ ಹಡಗು ಇದಾಗಿದೆ.
ಈ ನೌಕೆಗ ಅತ್ಯಾಧುನಿಕ ಸ್ಟೇಟ್ ಆಫ್ ದ ಆರ್ಟ್ ತಂತ್ರಜ್ಞಾನದ ಸಂಚರಣೆ ಮತ್ತು ಸಂವಹನ ಉಪಕರಣ, ಸೆನ್ಸಾರ್ಗಳು ಮತ್ತು ಯಂತ್ರಗಳನ್ನು ಅಳವಡಿಸಲಾಗಿದೆ.
ಇದು ಅವಳಿ ಇಂಜಿನ್ನ ಒಂದು ಹೆಲಿಕಾಪ್ಟರ್, 5 ಹೈ ಸ್ಪೀಡ್ ಬೋಟ್ಗಳನ್ನು ಹೊತ್ತೊಯ್ಯುವ ಸಾಮರ್ಥ್ಯದೊಂದಿಗೆ ಸಮುದ್ರದಲ್ಲಿ ತೈಲ ಸೋರಿಕೆ ತಡೆಗಟ್ಟಲು ಮಾಲಿನ್ಯ ಪ್ರತಿಕ್ರಿಯೆ ಉಪಕರಣದೊಂದಿಗೆ ವಿನ್ಯಾಸಗೊಳಿಸಲಾಗಿದೆ.
2450 ಟನ್ ಭಾರ, 9100 ಕಿಲೋವ್ಯಾಟ್ ಡೀಸೆಲ್ ಇಂಜಿನ್ನ ಸಾರಥಿ ನೌಕೆ 6000 ಎನ್ಎಂ ತಾಪಮಾನ ಸಹಿಷ್ಣುತೆಯೊಂದಿಗೆ ನಿರ್ದಿಷ್ಟ ವೇಗದಲ್ಲಿ ಚಲಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.