ಲಂಡನ್ : ಬಲೂಚಿಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಚೀನಾ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ನ್ನು ವಿರೋಧಿಸಿ ಲಂಡನ್ನಿನಲ್ಲಿನ ಚೀನಾ ರಾಯಭಾರಿ ಕಛೇರಿಯ ಹೊರಭಾಗದಲ್ಲಿ ಬಲೂಚಿಸ್ಥಾನ ಮತ್ತು ಸಿಂಧಿ ನಾಯಕರುಗಳು ಜಂಟಿ ಹೋರಾಟ ನಡೆಸಿದ್ದಾರೆ.
ಎರಡು ಪ್ರಾಂತ್ಯಗಳ ವಿಭಿನ್ನ ಸಂಘಟನೆಗಳಿಗೆ ಸೇರಿದ ಹೋರಾಟಗಾರರು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಹೋರಾಟ ನಡೆಸುತ್ತಿರುವುದು ಇದೇ ಮೊದಲು.
ಚೀನಾ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ ಮತ್ತು ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಇವರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಹೋರಾಟಗಾರರು ಪ್ರತಿಭಟನೆಯ ವೇಳೆ ಪಾಕಿಸ್ಥಾನ ಭದ್ರತಾ ಏಜೆನ್ಸಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಎಕಾನಮಿ ಹೆಸರಿನಲ್ಲಿ ಜನರ ವಿರುದ್ಧ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಯೋಜನೆಯಿಂದ ಬಲೂಚಿಸ್ಥಾನದ ಅಪಾರ ನಾಗರೀಕರು ಬೀದಿ ಪಾಲಾಗುತ್ತಿದ್ದಾರೆ. ಇದು ಎಕಾನಮಿಯ ಯೋಜನೆಯಲ್ಲ. ಜನರ ಜೀವನ ಮತ್ತು ಸಾವಿನ ಪ್ರಶ್ನೆಯಾಗಿದೆ. ಈ ಯೋಜನೆಯಿಂದ ಬಲೂಚಿ ಪರಿಸರಕ್ಕೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ವಿಶೇಷವೆಂದರೆ ಪ್ರತಿಭಟನೆ ವೇಳೆ ‘ಬಲೂಚಿಸ್ಥಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ’ ಮತ್ತು ‘ಹೆಜ್ಜೆ ಮುಂದಿಡಿ ಮೋದೀ ಜೀ, ನಾವು ನಿಮ್ಮೊಂದಿಗಿದ್ದೇವೆ’ ಎಂಬ ಘೋಷಣೆಗಳು ಮೊಳಗಿದವು.
‘ಸಿಪಿಇಸಿಗೆ ನೋ’, ‘ನಮ್ಮ ಸ್ವಾತಂತ್ರ್ಯ ನಮ್ಮ ಹಕ್ಕು’ ಎಂಬ ಘೋಷಣೆಗಳು ಕೇಳಿಬಂದವು.
ಬಲೂಚ್ ನಾಗರಿಕರ ಭಾರತದ ಪರ ಒಲವನ್ನು ವ್ಯಕ್ತಪಡಿಸುತ್ತಿರುವುದು ಪಾಕಿಸ್ಥಾನಕ್ಕೆ ತೀವ್ರ ಆತಂಕವನ್ನು ಸೃಷ್ಟಿಸಿದೆ. ಈ ಬಗ್ಗೆ ಚೀನಾವೂ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.