ಬೆಂಗಳೂರು: ಭಾರತದಾದ್ಯಂತ ವಿವಿಧ ನಗರಗಳಲ್ಲಿ ಫುಡ್ ಟ್ರಕ್ಗಳು ಎದ್ದೇಳುತ್ತಿವೆ. ಇವು ಗ್ರಾಹಕರ ಮನೆ ಬಾಗಿಲಿಗೆ ಬೇಕಾದ ಆಹಾರವನ್ನು ಒದಗಿಸುತ್ತವೆ.
ಇಂತಹ ಫುಡ್ ಟ್ರಕ್ ‘7th Sin’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಗ್ರಾಹಕರಿಕೆ ಇದು ವಿವಿಧ ಖಾದ್ಯವನ್ನು ಒದಗಿಸುತ್ತಿದೆ. ಮಹಿಳೆಯರಿಂದಲೇ ನಡೆಸಲ್ಪಡುತ್ತಿರುವ ಏಷ್ಯಾದಲ್ಲೇ ಮೊದಲ ಫುಡ್ ಟ್ರಕ್ ಇದು ಎಂಬುದು ಇದರ ವೈಶಿಷ್ಟ್ಯ.
ಅರ್ಚನಾ ಸಿಂಗ್ ಅವರು ಈ ‘7th Sin’ ಹಾಸ್ಪಿಟಾಲಿಟಿ ಸರ್ವೀಸ್ ಎಂಬ ಅಡುಗೆ ಕಂಪೆನಿಯ ಸಂಸ್ಥಾಪಕಿಯಾಗಿದ್ದು, ಎರಡು ವರ್ಷದ ಹಿಂದೆ ಈ ಕಲ್ಪನೆಯನ್ನು ಹೊರತಂದರು. ಕ್ರಿಶ್ಚಿಯನ್ ಧರ್ಮದ ಕಲ್ಪನೆಯ ಆಧಾರದಲ್ಲಿ ಈ ಕಂಪೆನಿಗೆ ‘7th Sin’ ಎಂದು ಹೆಸರಿಸಲಾಯಿತು. ಅಲ್ಲದೇ ಇದರ ಮೆನು ಓದಿದ ನಂತರ ಜನರೂ ಕೆಲವು ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ವಿಶೇಷತೆ ಎಂದರೆ ಈ ಮಹಿಳೆಯರೇ ಟ್ರಕ್ ಚಾಲನೆ, ಆಹಾರ ತಯಾರಿಕೆ, ಶುಚಿಗೊಳಿಸುವುದು, ವ್ಯವಹಾರ ನೋಡಿಕೊಳ್ಳುವುದು ಹೀಗೆ ಎಲ್ಲ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ತಾನು ಇತರ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಮಹಿಳೆಯರು ತಮ್ಮ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಹೊರತಾಗಿ ಸ್ವತಂತ್ರ ಮತ್ತು ಸ್ವಾವಲಂಬಿಯಾಗಿರಬೇಕು ಎಂದು ಅರ್ಚನಾ ಬಯಸುತ್ತಾರೆ. ಅವರು ಇದನ್ನು ಜಾಗತಿಕ ತಿನಿಸುಗಳ ಭಾರತೀಯ ಪಾಕಪದ್ಧತಿ ಎಂದು ವಿವರಿಸಿದ್ದಾರೆ.
ಶಾಖಾಹಾರಿ ಮಲೈ ರಿಸೊಟ್ಟೊ, ಚೆಟ್ಟಿನಾಡ್ ಮೂಲದ ಆಹಾರಗಳು, ಕ್ವೆಸಡ್ರಿಲ್ಲಾ, ಇಂಡೋ-ಪಾನ್ ಏಷ್ಯನ್ ರೈಸ್ ಇವರ ಕೆಲವು ಸಾಮಾನ್ಯ ಆಹಾರ ಮೆನುಗಳಾಗಿವೆ.
ವಾರದಲ್ಲಿ ಆರು ದಿನ ಕಾರ್ಯ ನಿರ್ವಹಿಸುತ್ತಿದ್ದು, 7ನೇ ದಿನ ದೇವಸ್ಥಾನ, ಚರ್ಚ್, ಮಸೀದಿಗಳ ಜನರಿಗೆ ಉಚಿತ ಆಹಾರವನ್ನು ಒದಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.