ನವದೆಹಲಿ : ಭಾರೀ ಸುದ್ದಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಸಿಕ್ಕಿದ್ದ ನರೇಂದ್ರ ದಾಮೋದರ ದಾಸ್ ಮೋದಿ ಎಂದು ಹಲವಾರು ಬಾರಿ ಬರೆಯಲಾಗಿದ್ದ ಸೂಟ್ ಇದೀಗ ಗಿನ್ನಿಸ್ ದಾಖಲೆ ಮಾಡಿದೆ.
ಬಿಕರಿಯಾದ ಜಗತ್ತಿನ ಅತ್ಯಂತ ದುಬಾರಿ ಸೂಟ್ ಎಂದು ಈ ಸೂಟ್ ಗಿನ್ನಿಸ್ ದಾಖಲೆ ಮಾಡಿದೆ.
ಈ ಸೂಟನ್ನು ಪ್ರಧಾನಿಗೆ ಉದ್ಯಮಿ ರಮೇಶ್ ಗಿರಾನಿ ಎಂಬುವವರು ತಮ್ಮ ಮಗನ ಮದುವೆಯ ಅಂಗವಾಗಿ ಉಡುಗೊರೆಯಾಗಿ ನೀಡಿದ್ದರು. ಇದರ ಮೂಲ ಬೆಲೆ ಅಂದಾಜು 11 ಲಕ್ಷ ರೂ. ಎನ್ನಲಾಗಿದೆ.
ಇದನ್ನು ಮೋದಿಯವರು 2015 ಜನವರಿ 26 ರಂದು ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಿದ್ದ ವೇಳೆ ತೊಟ್ಟಿದ್ದರು.
ಬಳಿಕ ಇದನ್ನು 2015 ರ ಫೆಬ್ರವರಿಯಲ್ಲಿ ಹರಾಜು ಹಾಕಲಾಗಿತ್ತು. ಹರಾಜಿನಲ್ಲಿ ಇದನ್ನು ಗುಜರಾತಿನ ವಜ್ರದ ವ್ಯಾಪಾರಿ ಲಾಲ್ ಜಿ ಭಾಯಿ ಪಟೇಲ್ ಎಂಬುವವರು ಬರೋಬ್ಬರಿ 4.31 ಕೋಟಿ ನೀಡಿ ಖರೀದಿ ಮಾಡಿದ್ದರು.
ಮೋದಿಗೆ ಉಡುಗೊರೆಯಾಗಿ ಸಿಕ್ಕ ಇತರ 800 ವಸ್ತುಗಳೊಂದಿಗೆ ಇದನ್ನು ಹರಾಜು ಹಾಕಲಾಗಿತ್ತು. ಈ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಗಂಗಾ ಶುದ್ಧೀಕರಣ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೀಡಲಾಗಿತ್ತು.
ಇದೀಗ ಮೋದಿ ತೊಟ್ಟಿದ್ದ ಆ ಸೂಟ್ ಇದುವರೆಗೆ ಬಿಕರಿಯಾದ ಜಗತ್ತಿನ ಅತ್ಯಂತ ದುಬಾರಿ ಸೂಟ್ ಎಂದು ಗಿನ್ನಿಸ್ ದಾಖಲೆಯ ಪುಟವನ್ನು ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.