ನವದೆಹಲಿ : ಅರುಣಾಚಲ ಪ್ರದೇಶದಲ್ಲಿ ಭಾರತೀಯ ವಾಯು ಸೇನೆ ನೂತನ ಏರ್ ಫೀಲ್ಡ್‌ನ್ನು ಪಡೆಯಲಿದೆ. ಚೀನಾದೊಂದಿಗಿನ ಗಡಿಯಿಂದ ಕೇವಲ 100 ಕಿ.ಮೀ. ದೂರದಲ್ಲಿ ಈ ಏರ್‌ಫೀಲ್ಡ್ ಇರಲಿದೆ.
ಆಗ್ನೇಯ ಅರುಣಾಚಲ ಪ್ರದೇಶದ ಫಸ್ಸಿ ಘಾಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಈ ಏರ್‌ಫೀಲ್ಟ್ ಆಗಸ್ಟ್ ೧೯ ರಿಂದ ಕಾರ್ಯಾರಂಭ ಮಾಡಲಿದೆ.
ಎಸ್‌ಯು-30ಎಂಕೆಐ ನಂತಹ ಹೆವಿ ಫೈಟರ್ ಮತ್ತು ಹೆವಿ ಲೈಫ್ ಟ್ರಾನ್ಸ್‌ಫೋರ್ಟರ್ ಪ್ಲೇನ್‌ಗಳು ಸೇರಿದಂತೆ ಎಲ್ಲಾ ರೀತಿ ಏರ್‌ಕ್ರಾಫ್ಟ್ ಮತ್ತು ಹೆಲಿಕಾಫ್ಟರ್‌ಗಳು ಈ ಏರ್‌ಫೀಲ್ಡ್‌ನ್ನು ಬಳಕೆ ಮಾಡಬಹುದಾಗಿದೆ. ಇದು ಭಾರತೀಯ ವಾಯುಸೇನೆಗೆ ಹೆಚ್ಚಿನ ಬಲವನ್ನು ತಂದುಕೊಡಲಿದೆ.
ಪೂರ್ವ ಭಾಗಗಳಲ್ಲಿ ಈ ಏರ್‌ಫೀಲ್ಡ್ ನಮ್ಮ ಕಾರ್ಯಾಚರಣೆಯನ್ನು ಹೆಚ್ಚಿಸಲಿದೆ ಮತ್ತು ನಮ್ಮ ಪ್ರತ್ಯುತ್ತರದ ಸಮಯವನ್ನು ಅಭಿವೃದ್ಧಿಗೊಳಿಸಲಿದೆ ಎಂದು ವಾಯುಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಸಮಯದಲ್ಲಿ ಕಾರ್ಯಾರಂಭ ಮಾಡಿದ 5 ನೇ ಏರ್‌ಫೀಲ್ಡ್ ಇದಾಗಿದ್ದು ಇದಕ್ಕೂ ಮುನ್ನ ಮೆಚುಕ್, ವೆಸ್ಟ್ ಸಿಯಾಂಗ್ ಜಿಲ್ಲೆ, ಝೈರೋ, ಅಲಾಂಗ್ ಮತ್ತು ವಲಾಂಗ್‌ನಲ್ಲಿ ಕಾರ್ಯಾರಂಭ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.