ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ವಿಶ್ವದಾಖಲೆಗೆ ಸೇರಲಿದೆ ‘ರಕ್ಷಾಬಂಧನ’
ಅಣ್ಣ-ತಂಗಿಯರ ಬಾಂಧವ್ಯಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ
ಬೆಂಗಳೂರು: ಆಗಸ್ಟ್ 18, ಗುರುವಾರ ಶ್ರಾವಣ ಹುಣ್ಣಿಮೆ. ಅಂದು ಸಹೋದರತೆಯನ್ನ ಸಾರುವ ರಕ್ಷಾಬಂಧನಪರಸ್ಪರ ಭ್ರಾತೃತ್ವವನ್ನು ಸಾರುವ ರಾಖಿ ಹಬ್ಬದ ಮೂಲಕ ವಿಶ್ವದಾಖಲೆ ನಿರ್ಮಿಸ ಹೊರಟಿದ್ದಾರೆ ಪರಮಪೂಜ್ಯ ದಿಗಂಬರ ಸಂತಶ್ರೇಷ್ಠ ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರು.
ಅಸೂಯೆ ಬದಲು ಸ್ನೇಹ, ಅಹಂ ಬದಲು ವಿನಮ್ರತೆ, ದ್ವೇಷಿಸುವ ಬದಲು ಪ್ರೀತಿಸುವ; ಮುರಿಯುವ ಬದಲು ಮನಸ್ಸುಗಳನ್ನು ಸೇರಿಸುವ, ಒಂದಾಗಿಸುವ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಆಯೋಜಿಸಿರುವ ಈ ವಿಶ್ವದಾಖಲೆಯ ರಾಖಿ ಹಬ್ಬದ ಆಚರಣೆಗೆ ಕರ್ನಾಟಕ ಜೈನ ಅಸೋಷಿಯೇಷನ್, ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ, ಶ್ರೀಖಂಡೇವಾಲಾ ಜೈನ ಸಮಾಜ ಹಾಗೂ ಸಕಲ ಜೈನ ಸಮಾಜ, ತ್ಯಾಗಿ ಸೇವಾ ಸಮಿತಿಗೆ ಕೈಜೋಡಿಸುತ್ತಿದೆ.
ಈ ಅಭೂತಪೂರ್ವ ರಾಖಿ ಹಬ್ಬವನ್ನು ದಾಖಲಿಸಲೆಂದೇ ವಿಶ್ವದಾಖಲೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಲಿದ್ದು, ಈ ತಂಡದ ಉಪಸ್ಥಿತಿಯಲ್ಲಿ ಎರಡು ವಿಶ್ವ ದಾಖಲೆಗಳು ಸೃಷ್ಟಿಯಾಗಲಿವೆ. ಮೊದಲ ಸುತ್ತಿನಲ್ಲಿ 400 ಕ್ಕೂ ಹೆಚ್ಚು ಯುವತಿಯರು ಏಕಕಾಲಕ್ಕೆ ತಮ್ಮ ಒಡಹುಟ್ಟಿದ ಅಣ್ಣಂದಿರಿಗೆ ರಾಖಿ ಕಟ್ಟಿ ದಾಖಲೆ ಬರೆಯಲಿದ್ದರೆ, 2ನೇ ಸುತ್ತಿನಲ್ಲಿ 400 ಕ್ಕೂ ಹೆಚ್ಚು ಅಣ್ಣಂದಿರು ತಮ್ಮ ಒಡಹುಟ್ಟಿದ ಪ್ರೀತಿಯ ತಂಗಿಯರಿಗೆ ರಕ್ಷೆ ಕಟ್ಟಿ ಸಹೋದರತೆಯ ಸಂದೇಶ ಸಾರಲಿದ್ದಾರೆ. ಮೂರನೇ ಸುತ್ತಿನಲ್ಲಿ 400 ಕ್ಕೂ ಹೆಚ್ಚು ಸಹೋದರಿಯರು ತಮ್ಮ ಸಹೋದರಿಯರಿಗೆ ರಕ್ಷೆ ಕಟ್ಟಲಿದ್ದು, ಕೊನೆಯದಾಗಿ ಸಹೋದರರು, ತಮ್ಮ ಸ್ನೇಹಿತರು, ಆತ್ಮೀಯರಿಗೆ ರಾಖಿ ಕಟ್ಟಿ ದಾಖಲೆ ಬರೆಯಲಿದ್ದಾರೆ.
ಧರ್ಮ ಧ್ವಜಾರೋಹಣದೊಂದಿಗೆ ವಿಶ್ವದಾಖಲೆಯ ರಕ್ಷಾಬಂಧನ:
ಇದಕ್ಕೂ ಮುನ್ನ ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್, ಮುನಿಶ್ರೀ 108 ಪಿಯೂಷ ಸಾಗರಜೀ ಮಹಾರಾಜ್, ಕ್ಷುಲ್ಲಕ 105 ಶ್ರೀ ಪರ್ವಸಾಗರ್ಜೀ ಮಹಾರಾಜ್ ಅವರಿಂದ ‘ಅಹಿಂಸಾ ಸಂಸ್ಕಾರ ಪಾದಯಾತ್ರೆ’ ನಡೆಯಲಿದೆ. ವಿವಿಪುರಂನ ಮಹಾವೀರ ಧರ್ಮಶಾಲಾದಿಂದ ಆರಂಭಗೊಳ್ಳುವ ಈ ಪವಿತ್ರ ಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಜೈನ ಮನಿಶ್ರೀಗಳಿಂದ ಧರ್ಮ ಧ್ವಜಾರೋಹಣ ನಡೆಯಲಿದ್ದು, ಈ ಮೂಲಕ ವಿಶ್ವದಾಖಲೆಯ ‘ಅಂತರ್ಮನ ರಕ್ಷಾಬಂಧನ ಮಹೋತ್ಸವ’ಕ್ಕೆ ಚಾಲನೆ ದೊರೆಯಲಿದೆ.
ಇದೇವೇಳೆ, ಅಂತರ್ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್ಜೀ ಅವರಿಗೆ ಜೈನ ಬಂಧುಗಳು ಚಿನ್ನ ಮತ್ತ ಬೆಳ್ಳಿಯ ಎಳೆಗಳಿಂದ ಮಾಡಿದ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜ್ಜೀ ಅವರು ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಲಿದ್ದಾರೆ.
ಸಂಜೆ 5 ಗಂಟೆಯವರೆಗೆ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ನೀವೂ ಸಹ ನಿಮ್ಮ ಒಡಹುಟ್ಟಿದ ಸಹೋದರಿಗೆ/ ಸಹೋದರನಿಗೆ ರಾಖಿ ಕಟ್ಟುವ ಮೂಲಕ ವಿಶ್ವ ದಾಖಲೆಗೆ ಸೇರ್ಪಡೆಗೊಳ್ಳಬಹುದು.
ಈ ಬೃಹತ್ ವಿಶೇಷ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಸಂಘಟಕ ಗುಣಪಾಲ್ ಜೈನ್ 9845130374, ಸಮಂತ ಜೈನ್ 9036023568, ಕೆ. ಜಯರಾಜ ಆರಿಗಾ- 99452 57575, ಆಶಾಪ್ರಭು-80955 88466 ಸಂಪರ್ಕಿಸಲು ಕೋರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.