ನವದೆಹಲಿ : ಭಾರತದ ಮೇಲ್ಮನೆಯಲ್ಲಿ ಬುಧವಾರ ಕಳೆದ 10 ವರ್ಷಗಳಿಂದ ಅನುಮೋದನೆಗೆ ಬಾಕಿ ಇದ್ದ ಜಿಎಸ್ಟಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ಇದು ನರೇಂದ್ರ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.
1990 ರ ಬಳಿಕ ಭಾರತದ ಅತಿ ಮಹತ್ವದ ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಇನ್ನು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಷ್ಟೇ ಬಾಕಿಯಿದೆ. ಇಲ್ಲಿ ಎನ್ಡಿಎ ಪ್ರಾಬಲ್ಯ ಇರುವ ಕಾರಣ ಇಲ್ಲಿ ಯಾವುದೇ ತೊಡಕಿಲ್ಲ.
ಜಿಎಸ್ಟಿ ಎಂದು ಕರೆಯಲ್ಪಡುವ ಸರಕು ಮತ್ತು ಸೇವಾ ತೆರಿಗೆ ದೇಶದಲ್ಲಿ ಏಕರೂಪದ ಮಾರುಕಟ್ಟೆಯನ್ನು ಜಾರಿಗೆ ತರಲಿದೆ.
ಜಿಎಸ್ಟಿ ಎನ್ನುವುದು ಮೋದಿ ಸರ್ಕಾರದ ಸುಧಾರಣಾ ಅಜೆಂಡಾದ ಪೋಸ್ಟರ್ ಚೈಲ್ಡ್ ಆಗಿತ್ತು. ಇದನ್ನು ಸಾಧಿಸಿರುವುದರಿಂದ ಭಾರತದ ಸುಧಾರಣಾ ಪ್ರಕ್ರಿಯೆಯ ನಿಖರತೆಗೆ ಹೆಚ್ಚಿನ ಒತ್ತು ಸಿಗಲಿದೆ ಎಂದು ಹಿರಿಯ ಬಂಡವಾಳ ವಿಶ್ಲೇಷಕ ನೀಲಾಂಗ್ ಮೆಹ್ತಾ ಹೇಳಿದ್ದಾರೆ.
2014 ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಧಿಸಿದ ಅತೀ ಮಹತ್ವದ ಸಾಧನೆ ಇದೆ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.