ಬದಿಯಡ್ಕ: ಬೆಳ್ಳೂರು ಗ್ರಾ.ಪಂ.ನ ವತಿಯಿಂದ ಕುಳದಪಾರೆಯ ಸಮುದಾಯ ಭವನದಲ್ಲಿ ಆಯುರ್ವೇದ ಶಿಬಿರ ಜರಗಿತು. ಬೆಳ್ಳೂರು ಗ್ರಾ.ಪಂ.ಉಪಾಧ್ಯಕ್ಷ ಪುರುಷೋತ್ತಮ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಜನ ಸ್ವಾಸ್ಥ್ಯ, ಆರೋಗ್ಯದ ಬಗ್ಗೆ ಸರಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು ಇದನ್ನು ಸಕಾಲದಲ್ಲಿ ಪಡೆದುಕೊಳ್ಳುವಲ್ಲಿ ಅರ್ಹರು ಮುಂದೆ ಬರಬೇಕಿದೆ ಎಂದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಮನೋಹರ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಭಾರತೀಯ ವೈದ್ಯ ಪದ್ಧತಿಯಲ್ಲಿ ಆಯುರ್ವೇದಕ್ಕೆ ಮಹತ್ವದ ಸ್ಥಾನ ಕಲ್ಪಿಸಲಾಗಿದ್ದು, ಜನೋಪಯೋಗಿ ಇಂತಹ ಶಿಬಿರಗಳು ಹೆಚ್ಚಿನ ಸೌಕರ್ಯದಲ್ಲಿ ಸಂಘಟಿಸುವಂತಾಗಿಸಲು ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ ಹಾಗೂ ರೋಗ ಮುಕ್ತ ಪ್ರದೇಶವನ್ನಾಗಿಸುವಲ್ಲಿ ಈ ಶಿಬಿರ ಪ್ರಮುಖ ಪಾತ್ರವಹಿಸಲಿ ಎಂದರು. ಮುಖ್ಯ ಅತಿಥಿಯಾಗಿ ಕಾರಡ್ಕ ಗ್ರಾ.ಪಂ.ನ ಆರೋಗ್ಯಾಧಿಕಾರಿ ಅರುಲ್ ಜ್ಯೋತಿ ಭಾಗವಹಿಸಿದ್ದರು. ಆರೋಗ್ಯ ಕೇಂದ್ರದ ಡಾ. ಆಜೀಶ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಸುಮಾರು 250 ಜನ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶಾರದ ಸ್ವಾಗತಿಸಿದರು. ನಿರ್ಮಲ ಪ್ರಾರ್ಥನೆ ಹಾಡಿದರು. ಕುಟುಂಬಶ್ರೀ, ಆಶಾ ವರ್ಕರ್ಸ್ ಹಾಗೂ ಸ್ಥಳೀಯ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.