ಕಠ್ಮಂಡು : ನೇಪಾಳದಲ್ಲಿರುವ ವಿಶ್ವಪ್ರಸಿದ್ಧ ಪಶುಪತಿನಾಥ ದೇಗುಲದಲ್ಲಿ ಧರ್ಮಶಾಲಾವನ್ನು ಸ್ಥಾಪಿಸಲು ಭಾರತ ಮುಂದಾಗಿದ್ದು 219.9 ಮಿಲಿಯನ್ ಹಣ ನೀಡಲಿದೆ.
ಧರ್ಮಶಾಲಾದ ನಿರ್ಮಾಣ ಕಾರ್ಯ ಎನ್ಆರ್ನ 219.9 ಮಿಲಿಯನ್ ಹಣಕಾಸಿನ ನೆರವಿನೊಂದಿಗೆ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಬಗೆಗಿನ ಪ್ರಸ್ತಾವನೆಗೆ ಭಾರತೀಯ ರಾಯಭಾರಿ ಮತ್ತು ಕಠ್ಮಂಡು-ಪಶುಪತಿ ಏರಿಯಾ ಡೆವಲಪ್ಮೆಂಟ್ ಟ್ರಸ್ಟ್ ಸಹಿ ಹಾಕಿವೆ. ಧರ್ಮಶಾಲಾದಲ್ಲಿ ಪಡಸಾಲೆ, ಮಲಗುವ ಕೋಣೆಗಳು, ಫ್ಯಾಮಿಲಿ ರೂಂ, ಡೈನಿಂಗ್ ಹಾಲ್, ಗ್ರಂಥಾಲಯ, ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲು ನೆರವಾಗುವಂತಹ ಹಾಲ್ಗಳು ಇರಲಿವೆ. ಯಾತ್ರಾರ್ಥಿಗಳ ಅವಶ್ಯಕತೆಗನುಗುಣವಾಗಿ ಇದನ್ನು ನಿರ್ಮಿಸಲಾಗುತ್ತಿದೆ.
ಅಲ್ಲದೆ 2015 ರ ಭೂಕಂಪದಲ್ಲಿ ಹಾನಿಗೀಡಾದ ಪಾರಂಪರಿಕ ತಾಣಗಳ ಪುನರ್ ನಿರ್ಮಾಣಕ್ಕೂ 500 ಕೋಟಿ ನೆರವು ನೀಡಲು ಭಾರತ ಸರ್ಕಾರ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.