ನವದೆಹಲಿ : ಉಗ್ರ ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ತನ್ನ ತಂದೆಯನ್ನು ಕೊಂದ ಅಮೇರಿಕಾದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಆನ್ಲೈನ್ನಲ್ಲಿ ಬಿಡುಗಡೆ ಮಾಡಿದ ಆಡಿಯೋವೊಂದರಲ್ಲಿ ಹೇಳಿದ್ದಾನೆ.
9/11 ದಾಳಿಕೋರ ಅಲ್ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ನನ್ನು ಅಮೇರಿಕಾದ ಯೋಧರು 2011 ರಲ್ಲಿ ಹೊಡದುರುಳಿಸಿತ್ತು. ಇದೀಗ ಲಾಡೆನ್ ಪುತ್ರ ಹಂಜಾ ಬಿನ್ ಲಾಡೆನ್ ತಂದೆಯನ್ನು ಕೊಂದ ಅಮೇರಿಕಾದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ. ಅಮೇರಿಕಾ ಸೇರಿದಂತೆ ಅದರ ಮಿತ್ರ ರಾಷ್ಟ್ರಗಳಲ್ಲಿ ಜಾಗತಿಕ ಭಯೋತ್ಪಾದನೆ ಮುಂದುವರೆಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾನೆ.
21 ನಿಮಿಷವಿರುವ ಆಡಿಯೋಗೆ ‘ವಿ ಆರ್ ಆಲ್ ಒಸಾಮಾ’ ಎಂದು ಹೆಸರಿಸಲಾಗಿದ್ದು, ಅದರಲ್ಲಿ ಅಮೇರಿಕಾವನ್ನು ಉದ್ದೇಶಿಸಿ, ‘ನಾವು ನಿಮ್ಮ ಮೇಲಿನ ದಾಳಿಯನ್ನು ಮುಂದುವರೆಸುತ್ತೇವೆ. ನಿಮ್ಮ ದೇಶದಲ್ಲೂ ಅಲ್ಲದೆ ವಿದೇಶಗಳಲ್ಲೂ ನಾವು ದಾಳಿ ನಡೆಸುತ್ತೇವೆ. ನಿಮ್ಮ ದಬ್ಬಾಳಿಕೆಯಿಂದ ಪ್ಯಾಲೆಸ್ಟೈನ್, ಅಫ್ಘಾನಿಸ್ಥಾನ, ಸಿರಿಯಾ, ಇರಾಕ್, ಯೆಮೆನ್, ಸೊಮಾಲಿಯ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ಜನರು ನರಳುತ್ತಿದ್ದಾರೆ. ಅವರೆಲ್ಲರ ಪ್ರತೀಕಾರವನ್ನು ನಾವು ತೀರಿಸಿಕೊಳ್ಳುತ್ತೇವೆ. ಇದು ಒಸಾಮಾ ಅವರೊಬ್ಬರಿಗೋಸ್ಕರದ ಪ್ರತೀಕಾರವಲ್ಲದೆ, ಇಸ್ಲಾಂನ್ನು ದ್ವೇಷಿಸುವ ಪ್ರತಿಯೊಬ್ಬರ ಮೇಲೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ‘ ಎಂದು ಹಮ್ಜಾ ಬಿನ್ ಲಾಡೆನ್ ಪ್ರತಿಜ್ಞೆ ಮಾಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.