ಸವಣೂರು : ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜಮುಖಿ ಚಟುವಟಿಕೆ ಜೇಸಿಐಯ ಜೀವಾಳ, ಉತ್ತಮ ಕೆಲಸಮಾಡಿದಾಗ ಸಮಾಜ,ಸಂಸ್ಥೆ ಗುರುತಿಸುತ್ತದೆ ಎಂದು ಜೆಸಿಐ ವಲಯ 15ರ ಅಧ್ಯಕ್ಷ ಸಂದೀಪ್ ಕುಮಾರ್ ಹೇಳಿದರು.
ಅವರು ಸವಣೂರು ಜೆಸಿಐ ಆಶ್ರಯದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಜೆಸಿಐ ಕೊಡಮಾಡುವ ಜೆ.ಎಫ್.ಪಿ. ಪದವಿಯನ್ನು ಹಿರಿಯ ಸಹಕಾರಿ ಧುರೀಣ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈಯವರಿಗೆ ಪ್ರಧಾನ ಮಾಡಿ ಮಾತನಾಡಿದರು.
ಕಳೆದ ಸಾಲಿನ ಜೇಸಿಐಯ ರಾಷ್ಟ್ರೀಯ ಕಾರ್ಯಕ್ರಮವಾದ ಬಡವರಿಗೆ ಶೌಚಾಲಯ ನಿರ್ಮಾಣ ಸಮಧಾನ್ ಯೋಜನೆಯನ್ನು ಸವಣೂರು ಜೆಸಿಐ ಮಾಡಿತ್ತು. ಇದಕ್ಕಾಗಿ ಸವಣೂರು ಜೆಸಿಐಗೆ ಪ್ರೋತ್ಸಾಹಕರಾಗಿರುವ ಸೀತಾರಾಮ ರೈಯವರಿಗೆ ಪದವಿಯನ್ನು ನೀಡಲು ಇಲ್ಲಿನ ಘಟಕ ಮುಂದಾಗಿರುವುದು ಉತ್ತಮ ಕಾರ್ಯ. ಇದೇ ಸಮಾಧಾನ್ ಯೋಜನೆಗಾಗಿ ಭಾರತದ ಜೆಸಿಐಗೆ ಅಂತರಾಷ್ಟ್ರೀಯ ಪ್ರಶಸ್ತಿ ಕೂಡ ದೊರೆತಿದೆ. ಈ ಯೋಜನೆಯನ್ನು ಅನುಷ್ಠಾನ ಮಾಡಿದ ಕೆಲವೇ ಸಂಸ್ಥೆಗಳಲ್ಲಿ ಸವಣೂರು ಘಟಕವೂ ಒಂದು ಎಂದರು.
ಮುಖ್ಯ ಅತಿಥಿ ಜೆಸಿಐ ವಲಯ 15ರ ಪೂರ್ವಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್ ಮಾತನಾಡಿ, ಉತ್ತಮ ಕೆಲಸ ಮಾಡಿದನ್ನು ಸಮಾಜಕ್ಕೆ ತಿಳಿಯಪಡಿಸಿದರೆ ಅದು ಇನ್ನಷ್ಟು ಜನತೆಗೆ ಪ್ರೇರಣೆನೀಡಿದಂತಾಗುತ್ತದೆ. ಈ ಬಾರಿಯ ಯೋಜನೆಯಾದ ನ್ಯಾಪ್ಕಿನ್ ಪ್ಯಾಡ್ ಬರ್ನ್ ಮಾಡುವ ಸಾಧನವನ್ನು ಅವಶ್ಯವಿರುವ ಕಡೆ ನೀಡುವುದು. ಈ ಕಾರ್ಯಕ್ಕೂ ಎಲ್ಲರ ಸಹಕಾರ ಅಗತ್ಯ ಎಂದರು.
ಪದವಿ ಸ್ವೀಕರಿಸಿ ಮಾತನಾಡಿದ ಕೆ. ಸೀತಾರಾಮ ರೈಯವರು, ಪ್ರತಿ ಬಾರಿಯೂ ಸವಣೂರಿನಲ್ಲಿ ರೋಟರಿ, ಲಯನ್ಸ್ ಕ್ಲಬ್ ಗಳ ಇಂಟರ್ ಮೀಟ್ ಪೆಲೋಶಿಫ್ ಕಾರ್ಯಕ್ರಮ ನಡೆಸುತ್ತಿದ್ದು ಮುಂದಿನ ಕಾರ್ಯಕ್ರಮಕ್ಕೆ ಸವಣೂರು ಜೆಸಿಐಯನ್ನು ಸೇರಿಸಿಕೊಂಡು ಈ ಕಾರ್ಯಕ್ರಮ ನಡೆಸುತ್ತೇನೆ. ಸಂಘಟನೆಗಳಿಂದ ಊರಿನ ಅಭಿವೃದ್ದಿಯಾಗಬೇಕು ಈ ನಿಟ್ಟಿನಲ್ಲಿ ಸವಣೂರಿನ ಎಲ್ಲಾ ಸಂಸ್ಥೆಗಳ ಸಮಾಜಮುಖಿ ಚಟುವಟಿಕೆಗೆ ಸದಾ ಪ್ರೋತ್ಸಾಹ ನೀಡಲಾಗುವುದು. ಊರಿನ ಅಭಿವೃದ್ದಿಗೆ ನಮ್ಮ ಮೊದಲ ಆದ್ಯತೆ ಎಂದರು.
ಸವಣೂರು ಜೆಸಿಐ ಅಧ್ಯಕ್ಷ ವಸಂತ್ ಎಸ್. ವೀರಮಂಗಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಕಾರಿ ಅಶ್ವಿನ್ ಎಲ್.ಶೆಟ್ಟಿ, ಟ್ರಸ್ಟಿ ಎನ್.ಸುಂದರ ರೈ ಸವಣೂರು, ಸುಳ್ಯ ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನ ಪ್ರಾಚಾರ್ಯೆ ಮಮತಾ, ವಿದ್ಯಾರಶ್ಮಿ ಪ್ರ.ಧ.ಕಾಲೇಜಿನ ಪ್ರಾಚಾರ್ಯೆ ಮಿಥಾಲಿ ಪ್ರಸನ್ನಶೆಟ್ಟಿ, ನರ್ಸಿಂಗ್ ಕಾಲೇಜಿನ ಪುಷ್ಪಲತಾ,ಸವಣೂರು ಜೆಸಿಐನ ಪೂರ್ವಾಧ್ಯಕ್ಷ ಶಶಿಕುಮಾರ್ ಬಿ.ಎನ್, ಉಪಾಧ್ಯಕ್ಷ ದಯಾನಂದ ಮೆದು, ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಸದಸ್ಯರಾದ ಸುಬ್ರಹ್ಮಣ್ಯ ಬಿ.ಎಸ್, ಚಂದ್ರಶೇಖರ್ ಪಿ, ಎಂ.ಎ.ರಫೀಕ್ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಚಾರ್ಯ ಸೀತಾರಾಮ ಕೇವಳ ಪ್ರಸ್ತಾವನೆಗೈದರು, ರಮೇಶ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.