ಲಂಡನ್: ವಲಸಿಗರ ಇತ್ತೀಚಿನ ಮೆಡಿಟರೇನಿಯನ್ ಕ್ರಾಸಿಂಗ್ನಲ್ಲಿ ಸುಮಾರು 700 ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಕಳೆದ ಮೂರು ದಿನಗಳಿಂದ ವಲಸಿಗರು ಅಧಿಕ ಪ್ರಮಾಣದಲ್ಲಿ ಕ್ರಾಸಿಂಗ್ ಮಾಡುತ್ತಿದ್ದಾರೆ. ದೋಣಿಗಳಲ್ಲಿ ಜನರ ಸಂಖ್ಯೆ ಹೆಚ್ಚಾದ ಪರಿಣಾಮ ಅದು ಮಗುಚಿ ಬೀಳುತ್ತಿದೆ. ಈಗಾಗಲೇ ಹಲವಾರು ಪ್ರಾಣಗಳನ್ನು ರಕ್ಷಣಾ ಶಿಪ್ಗಳು ರಕ್ಷಿಸಿವೆ.
2015ರ ಎಪ್ರಿಲ್ನಿಂದ ಅವಘಢಗಳು ನಿರಂತರವಾಗಿ ನಡೆಯುತ್ತಿದ್ದು, ಕೆಲವೊಂದು ಮಾನವತಾ ಸಂಸ್ಥೆಗಳು ವಲಸಿಗರ ರಕ್ಷಣೆಗೆ ನಿಂತಿವೆ.
ಯುದ್ಧ ಪೀಡಿತ ದೇಶಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯುರೋಪ್ನತ್ತ ಈ ವಲಸಿಗರು ಬರುತ್ತಿದ್ದಾರೆ. ಮಾರ್ಗ ಮಧ್ಯೆಯೇ ಹಲವಾರು ಮಂದಿ ಪ್ರಾಣತ್ಯಾಗ ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.