ಭಾರತ ಒಲಿಂಪಿಕ್ಸ್ ಸ್ಪರ್ಧೆಯ ಒಂದು ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದು, ಆ ಕ್ರೀಡೆ ಹಾಕಿ ಆಗಿದೆ. ಎಂಟು ಚಿನ್ನದ ಪದಕಗಳನ್ನು ತಮ್ಮದಾಗಿಸಿರುವುದು ಇದಕ್ಕೆ ಪುರಾವೆಯಾಗಿದೆ.
ಹೌದು, ಇಂದಿನಿಂದ 88 ವರ್ಷಗಳ ಹಿಂದೆ 1928ರ ಮೇ 26ರಂದು ಭಾರತ ಹಾಕಿ ತಂಡ ಆಮ್ಸ್ಟ್ರ್ಡ್ಯಾಮ್ನಲ್ಲಿ ಆತಿಥೇಯ ಹಾಲೆಂಡ್ ವಿರುದ್ಧ 3-0 ಗೋಲುಗಳಿಂದ ಗೆದ್ದು ಒಲಿಂಪಿಕ್ಸ್ನಲ್ಲಿ ಮೊದಲ ಚಿನ್ನದ ಪದಕ ಪಡೆದು ಹೊಸ ಯುಗ ಆರಂಭಿಸಿತು.
ಮಾ.10, 1928ರಂದು ಭಾರತ ಹಾಕಿ ತಂಡ ಲಂಡನ್ಗೆ ತೆರಳಿತು. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿ ಜೈಪಾಲ್ ಸಿಂಗ್ ಭಾರತ ತಂಡವನ್ನು ಸೆಮಿಫೈನಲ್ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನಂತರ ಉಪ ನಾಯಕ ಎರಿಕ್ ಪೆನ್ನಿಂಜರ್ ತಂಡದ ನಾಯಕತ್ವ ವಹಿಸಿ ತಂಡವನ್ನು ಫೈನಲ್ ತಲುಪಿಸಿದರು.
ಮೇ 17ರಂದು ಆಸ್ಟ್ರಿಯಾವನ್ನು ಎದುರಿಸಿದ ಭಾರತ 6-0 ಗೋಲುಗಳಿಂದ ಗೆಲುವು ಸಾಧಿಸಿತು. ಈ ಗೆಲುವಿನ ಹಾದಿ ನಂತರ ಫೈನಲ್ ತಲುಪುವವರೆಗೆ ನಿಲ್ಲಲಿಲ್ಲ. ನಂತರ ಬೆಲ್ಜಿಯಂ ವಿರುದ್ಧ 9-0, ಡೆನ್ಮಾರ್ಕ್ ವಿರುದ್ಧ 5-0 ಹಾಗೂ ಸೆಮಿಫೈನಲ್ನಲ್ಲಿ ಸ್ವಿಟ್ಜರ್ಲ್ಯಾಂಡ್ನ್ನು 6-0 ಗೋಲುಗಳಿಂದ ಸೋಲಿಸಿದ ಭಾರತ ಫೈನಲ್ ಪ್ರವೇಶಿಸಿತು.
ಫೈನಲ್ನಲ್ಲಿ ಹಾಲೆಂಡ್ ಎದುರು 3-0 ಗೋಲುಗಳಿಂದ ಜಯಗಳಿಸಿದ ಭಾರತ ಹಾಕಿ ತಂಡ ಮೊದಲ ಒಲಿಂಪಿಕ್ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಹಾಕಿ ಕ್ರೀಡೆಯಲ್ಲಿ ಮೊದಲ ಚಿನ್ನದ ಪದಕ ಪಡೆದ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ.
ಇಂದಿಗೂ ಭಾರತೀಯ ಹಾಕಿಯ ಸೂಪರ್ಸ್ಟಾರ್ ಎನಿಸಿಕೊಂಡಿರುವ ಧ್ಯಾನ್ಚಂದ್ ಈ ಒಲಿಂಪಿಕ್ ಸ್ಪರ್ಧೆಯಲ್ಲಿ ಪಾದಾರ್ಪಣೆ ಮಾಡಿದ್ದು ವಿಶೇಷ.
ಹಾಕಿಯಲ್ಲಿ ಭಾರತ ತಂಡ ತೋರಿದ ಪ್ರದರ್ಶನದಿಂದ ಹಾಕಿ ಕ್ರೀಡೆ ವಿಶ್ವ ಪ್ರಸಿದ್ಧ ಕ್ರೀಡೆಯಾಗಿ ಹೊರಹೊಮ್ಮಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.