ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಿಗೆ ನೋಟಿಸ್ ನೀಡಿರುವ ಕುರಿತು ಉತ್ತರಿಸಿರುವ ಕುಂಟಾರು ರವೀಶ್ ತಂತ್ರಿಯವರು ಕಾರ್ಯನಿರ್ವಹಣಾಧಿಕಾರಿಗೆ ತಂತ್ರಿಗಳಿಗೆ ನೋಟೀಸ್ ನೀಡುವ ಅಧಿಕಾರ ಇರುವುದಿಲ್ಲ ಎಂದು ದೇವಸ್ಥಾನದ ನೋಟೀಸ್ಗೆ ಉತ್ತರ ನೀಡಿದ್ದಾರೆ.
ಜಿಲ್ಲಾಧಿಕಾರಿಯವರ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆ ನನ್ನನ್ನು ತಂತ್ರಿಗಳಾಗಿ ನಿಯೋಜಿಸಿದೆ. ತಂತ್ರಿ ಹುದ್ದೆಯು ಸರಕಾರಿ ನೌಕರನ ಹುದ್ದೆಯಾಗಿರದೆ ಅದು ಗೌರವದ ಹುದ್ದೆಯಾಗಿದೆ. ಆದುದರಿಂದ ತಂತ್ರಿಗಳಿಗೆ ಸರಕಾರದ ಸೇವಾ ನಿಯಮ ಅನ್ವಯವಾಗುವುದಿಲ್ಲ ಮತ್ತು ಅವರಿಗೆ ನೋಟೀಸ್ ನೀಡುವ ಅಧಿಕಾರ ಅಥವಾ ಕಾರಣ ಕೇಳುವ ಅಧಿಕಾರ ಕಾರ್ಯನಿರ್ವಹಣಾಧಿಕಾರಿಗಳಿಗೆ ಇರುವುದಿಲ್ಲ ಎಂದು ಅವರು ನೋಟೀಸ್ಗೆ ಪ್ರತಿಕ್ರಿಯೆ ನೀಡಿ ಉತ್ತರಿಸಿದ್ದಾರೆ.
ತಂತ್ರಿಗಳು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿಯಮವು ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಕಾನೂನು ಅನ್ವಯ ಇರುವುದಿಲ್ಲ ಮತ್ತು ಅವರು ರಾಜಕೀಯ ಪಕ್ಷದಲ್ಲಿ ಗುರುತಿಸಬಾರದೆಂದು ಏನೂ ಇಲ್ಲ. ಚುನಾವಣೆಗೆ ಸ್ಪರ್ಧಿಸುವುದು ಪ್ರಜಾಪ್ರಭುತ್ವದ ಹಕ್ಕಾಗಿರುತ್ತದೆ. ಇದರಿಂದ ತಂತ್ರಿಗಳು ಅಚಾರ-ವಿಚಾರ, ದೇವಾಲಯದ ಪೂಜೆ -ಪುರಸ್ಕಾರಗಳನ್ನು ಮಾಡಬಾರದೆಂದೇನಿಲ್ಲ.
ತಂತ್ರಿ ಹುದ್ದೆಯಲ್ಲಿರುವವರನ್ನು ಕರ್ತವ್ಯ ಮಾಡುವುದರಿಂದ ತಡೆಯುವ ಮತ್ತು ಅವರನ್ನು ಆ ಕೆಲಸದಿಂದ ಬಿಡುಗಡೆ ಮಾಡುವ ಹಕ್ಕು ಕಾರ್ಯನಿರ್ವಹಣಾಧಿಕಾರಿಗಳಿಗಿಲ್ಲದ ಕಾರಣ ಈ ಹಿಂದಿನಂತೆ ಶ್ರದ್ಧ್ಧಾ – ಭಕ್ತಿಯಿಂದ ದೇವಳದ ಧಾರ್ಮಿಕ ಕಾರ್ಯಗಳನ್ನು ಹಲವು ವರ್ಷಗಳಿಂದ ನಿರ್ವಹಿಸಲು ಮತ್ತು ಶ್ರೀ ದೇವರ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ಅನುಮತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.