ಬೆಳ್ತಂಗಡಿ : ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿನ 64 ಪ್ರೌಢಶಾಲೆಯ 3727 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 87.98 ಫಲಿತಾಂಶ ದಾಖಲಾಗಿದೆ. 14 ಶಾಲೆಗಳು ಶೇ.100 ಫಲಿತಾಂಶವನ್ನು ಗಳಿಸಿದ್ದು ಅವುಗಳಲ್ಲಿ 6 ಸರಕಾರಿ ಶಾಲೆಗಳಾಗಿವೆ.
ಪರೀಕ್ಷೆಗೆ 2204 ಬಾಲಕರು ಹಾಗೂ 2032 ಬಾಲಕಿಯರು ಹಾಜರಾಗಿದ್ದು, ಅವರಲ್ಲಿ 1859 ಬಾಲಕರು ಹಾಗೂ 1868 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಒಟ್ಟು 4236 ವಿದ್ಯಾರ್ಥಿಗಳು ಹಾಜರಾಗಿದ್ದು, 3727 ಉತ್ತೀರ್ಣರಾಗಿದ್ದಾರೆ. ತಾಲೂಕಿನಲ್ಲಿಯೂ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಬಾಲಕಿಯರ ಒಟ್ಟು ಶೇ. ಫಲಿತಾಂಶ 91.93 ಆಗಿದ್ದು ಬಾಲಕರ ಫಲಿತಾಂಶ ಶೇ. 84.35 ಆಗಿದೆ. ಒಟ್ಟು ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 278 ಎ+ ಹಾಗೂ 728 ಎ ಶ್ರೇಣಿ ಪಡೆದ್ದಾರೆ.
ಶೇ. 100 ಫಲಿತಾಂಶ ಪಡೆದುಕೊಂಡ ಶಾಲೆಗಳು : ಸರಕಾರಿ ಶಾಲೆಗಳ ಪೈಕಿ ಗುರುವಾಯನಕರೆ ಸ. ಪ್ರೌ.ಶಾಲೆ ಸತತ 5 ನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದ್ದು ತನ್ನಗರಿಮೆಯನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ 82 ವಿದ್ಯಾರ್ಥಿಗಳು ಉತ್ತೀರ್ಣರಾಗಿದಾರೆ. ನೇಲ್ಯಡ್ಕ ಪ್ರೌ.ಶಾಲೆಯಲ್ಲಿ 36, ಪೆರ್ಲಬೈಪಾಡಿ ಸ. ಪ್ರೌ. ಶಾಲೆಯಲ್ಲಿ 24, ಮೊರಾರ್ಜಿ ಮಚ್ಚಿನ ಶಾಲೆಯಲ್ಲಿ 44, ಸವಣಾಲು ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆಯಲ್ಲಿ 35, ಬುಳೇರಿ ಸರಕಾರಿ ಪ್ರೌಢ ಶಾಲೆಯಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿ ಶಾಲೆಗಳ ಪೈಕಿ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 31, ಮಡಂತ್ಯಾರು ಸೇ.ಹಾ. ಆಂಗ್ಲ ಮಾಧ್ಯಮ ಶಾಲೆಯಲ್ಲಿ 70, ಮುಂಡಾಜೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 24, ಲಾಯಿಲ ಸೈಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ 57, ಕಾರ್ಯತ್ತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 27, ಹಳೇ ಕೋಟೆ ವಾಣಿಆಂಗ್ಲ ಮಾಧ್ಯಮ ಶಾಲೆಯಲ್ಲಿ 55, ಅಳದಂಗಡಿ ಸೈಂಟ್ ಪೀಟರ್ ಶಾಲೆಯಲ್ಲಿ 25, ಹಾಗೂ ಬೆಂದ್ರಾಳ ಸೈಂಟ್ ಸಾವಿಯೋ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲೂಕಿನಲ್ಲಿ ಲಾಯಿಲ ಸೈಂಟ್ ಮೇರಿಸ್ ಪ್ರೌಢ ಶಾಲೆಯ ಸುಶ್ರುತ್ಯು.ಕೆ. 624 ಅಂಕ ಗಳಿಸಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಉಜಿರೆ ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಅವಿನಾಶ್ 622 ಅಂಕಗಳಿಸಿ ತಾಲೂಕಿಗೆ ದ್ವಿತೀಯ ಸ್ಥಾನೀಯರಾಗಿದಾರೆ.
ಕನ್ನಡ ಮಾಧ್ಯಮ ಶಾಲೆಗಳ ಪೈಕಿಅತಿ ಹೆಚ್ಚು ವೇಣೂರುಜೂ. ಕಾಲೇಜಿನ ನಿಶಾ 616 ಹಾಗೂ ಮುಂಡಾಜೆ ಪ್ರೌ.ಶಾಲೆಯ ಮಧುಶ್ರೀ 616 ಅಂಕಗಳನ್ನು ಪಡೆದಿದ್ದಾರೆ.
ತಾಲೂಕಿನ ಕೇಂದ್ರ ಸ್ಥಾನದಲ್ಲಿರುವ ಸರಕಾರಿ ಜೂನಿಯರ್ ಕಾಲೇಜು ಅತಿ ಕನಿಷ್ಠ ಅಂದರೆ ಶೇ. 55.22 ಫಲಿತಾಂಶ ಮಾತ್ರ ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.