ಬೀದರ್ : ಬೀದರ್ನ ಕೋಳಿ ಫಾರಂ ಒಂದರಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಂಡು ಬಂದಿದ್ದು, ಸುತ್ತಮುತ್ತಲ 1.ಕಿ.ಮಿ. ತನಕ ಇರುವ ಕೋಳಿ ಫಾರಂನ ಕೋಳಿಗಳನ್ನು ನಾಶಪಡಿಸಲು ಪಶುಸಂಗೋಪನಾ ಇಲಾಖೆ ಆದೇಶಿಸಿದೆ.
ಬೀದರ್ನ ಕೋಳಿ ಫಾರಂ ಒಂದರಲ್ಲಿ ಹಕ್ಕಿ ಜ್ವರದ ಸೋಂಕು ಕಂಡು ಬಂದಿದ್ದು, ಸಾವಿರಾರು ಕೋಳಿಗಳು ಸಾವನ್ನಪ್ಪಿದೆ. 20 ಸಾವಿರಕ್ಕಿಂತಲೂ ಹೆಚ್ಚಿನ ಕೋಳಿಗಳಿಗೆ ಸೋಂಕು ತಗುಲಿದೆ. ಫಾರಂನಲ್ಲಿ ಇರುವ ಒಟ್ಟು 1.5 ಲಕ್ಷ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಲು ಇಲಾಖೆ ಮುಂದಾಗಿದೆ.
ಪಶುಸಂಗೋಪನಾ ಸಚಿವ ಎ. ಮಂಜು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದ ಇತರ ಭಾಗಗಳಲ್ಲಿ ಹರಡದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಮೆಳಕೇರಾ ಫಾರಂ ಸುತ್ತಲಿನ 1 ಕಿ.ಮೀ ಪರಿಸರದಲ್ಲಿನ ಫಾರಂ ಕೋಳಿಗಳನ್ನು ನಾಶ ಪಡಿಸಲು ಕ್ರಮಕೈಗೊಂಡಿದ್ದು, ಪರಿಹಾರವನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಕ್ಕಿ ಜ್ವರ ಹರಡುವ ಭೀತಿ ಇಲ್ಲ : ಹಕ್ಕಿ ಜ್ವರ ಹರಡದಂತೆ ಎಲ್ಲಾ ಎಚ್ಚರಿಕಾ ಕ್ರಮಗಳನ್ನು ಕ್ರಮಕೈಗೊಳ್ಳಲಾಗಿದ್ದು ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕರ್ನಾಟಕ ಪೌಲ್ಟ್ರಿ ರೈತರು ಮತ್ತು ಬ್ರೀಡರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೆಚ್. ಎನ್. ನಾಗಭೂಷಣ್ ತಿಳಿಸಿದ್ದಾರೆ.
ಅಲ್ಲದೇ ಮಾಂಸವನ್ನು ತಿನ್ನುವಾಗ 120 ರಿಂದ 150 ಡಿಗ್ರಿ ವರೆಗೆ ಬಿಸಿ ಮಾಡಿ ಸೇವಿಸಲಿ, ಅಲ್ಲದೆ ಸಾಗಾಟ ಮಾಡುವವರು ಫಾರಂಗೆ ಬರುವ ಮುನ್ನ ರೋಗ ಬರದಂತೆ ಔಷಧಿಯನ್ನು ಸಿಂಪಡಿಸುವುದರಿಂದ ರೋಗ ತಡೆಯಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.