ಮುಡಿಪು : ನಮ್ಮ ಭಾರತವು ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಶ್ರೀಮಂತವಾದ ದೇಶವಾಗಿದೆ. ಆದರೆ ಇಂದು ಪರಿಸ್ಥಿತಿ ಬದಲಾಗುತ್ತಿದ್ದು ಈ ನಿಟ್ಟಿನಲ್ಲಿ ನಮ್ಮ ಮನೆಯ ಮಕ್ಕಳ ರಕ್ತದ ಕಣದಲ್ಲಿ ದೇಶಭಕ್ತಿಯ ಸಂಚಾರವನ್ನು ಮಾಡಬೇಕಿದೆ. ಧಾರ್ಮಿಕ ಸಂಸ್ಕೃತಿ, ಸಂಸ್ಕಾರವನ್ನು ಮನೆ ಮನಗಳಲ್ಲಿ ಬೆಳಗಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಕಾರ್ಕಳ ಅಕ್ಷರ ಬಳಗದ ಕಾರ್ಯದರ್ಶಿ ಕುಮಾರಿ ಅಕ್ಷಯಾ ಗೋಖಲೆ ಅವರು ಅಭಿಪ್ರಾಯ ಪಟ್ಟರು.
ಮುಡಿಪುವಿನ ಧರ್ಮ ಜಾಗೃತಿ ವೇದಿಕೆ ಆಶ್ರಯದಲ್ಲಿ ಮುಡಿಪುವಿನ ಮುಡಿಪಿನ್ನಾರ್ ದೈವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಧಾರ್ಮಿಕ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ತಾಯಂದಿರು ಒಟ್ಟು ಸೇರಿ ಒಂದಿಷ್ಟು ಚಿಂತನೆಯನ್ನು ಮಾಡಬೇಕಿದೆ. ಮನೆಯಲ್ಲಿ ಅಪ್ಪ ಅಮ್ಮಂದಿರು ಮಕ್ಕಳಿಗೆ ಸರಿಯಾದ ನಿಟ್ಟಿನಲ್ಲಿ ಸರಿಯಾದ ಸಂಸ್ಕಾರವನ್ನು, ಸಂಸ್ಕೃತಿಯನ್ನು ಕಲಿಸಿಕೊಡದಿದ್ದರೆ ಸಮಾಜದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತದೆ. ಹಸಿದವನಿಗೆ ಅನ್ನ ಕೊಡುವ ಸಂಸ್ಕೃತಿ ನಮ್ಮದಾಗಿತ್ತು. ಆಗ ಈಗ ಪರಿಸ್ಥಿತಿ ಬದಲಾಗಿದೆ. ಮನೆ, ಆವರಣ ದೊಡ್ಡದಾಗಿದೆ. ಅಲ್ಲದೆ ಮನೆಯ ಎದುರಿನ ಗೇಟ್ ಕೂಡಾ ಎತ್ತರವಾಗಿ ನಿರ್ಮಾಣಗೊಂಡು ಅದರಲ್ಲಿ ನಾಯಿ ಇದೆ ಎಚ್ಚರಿಕೆ ಅತಿಥಿಗಳೇ ಎಂದು ಬರೆದಿಡಲಾಗುತ್ತಿದೆ. ಇದರಿಂದಾಗಿ ಸಂಸ್ಕೃತಿಯು ಇಂದು ವಿಕೃತಿಯಾಗಿದೆ ಎಂದು ಹೇಳಿದರು.
ಇಂದು ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡಬೇಕಾದ ಮಕ್ಕಳು ಮೊಬೈಲ್ಗಳಲ್ಲಿ ಫೆಸ್ಬುಕ್ಗಳಲ್ಲಿ ನಿರತರಾಗಿರುತ್ತಾರೆ. ಇದರಿಂದಾಗಿಯೇ ಸಮಾಹದಲ್ಲಿ ಲವ ಜಿಹಾದ್ನಂತಹ ಸೃಷ್ಟಿಯಾಗುತ್ತದೆ. ಪೋಷಕರು ತಮ್ಮ ಮಕ್ಕಳ ಚಲನವಲನದ ಬಗ್ಗೆ ನಿಗಾ ಇಡಬೇಕಾಗಿದೆ. ಕರಿನಾ, ಕತ್ರಿನಾ ಕೈಫ್ ಮುಂತಾದವರನ್ನೇ ರೋಲ್ ಮೋಡಲ್ಗಳಾಗಿ ಮಕ್ಕಳಿಗೆ ತೋರಿಸುವ ಬದಲು ದೇಶಕ್ಕಾಗಿ ತ್ಯಾಗ ಮಾಡಿದ, ದೇಶದ ರಕ್ಷಣೆಗಾಗಿ ಹೋರಾಡಿದ ಆದರ್ಶ ಮಹಿಳೆಯರ ವ್ಯಕ್ತಿತ್ವನ್ನು ತಿಳಿಯಪಡಿಸಬೇಕಾಗಿದೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಡಿಪ್ಪಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ಕೊಡಕ್ಕಲ್ಲು ಮುರಳಿ ಮೋಹನ ಭಟ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮ ಜಾಗೃತಿ ವೇದಿಕೆಯ ಗೌರವ ಸಲಹೆಗಾರರಾದ ಟಿ.ಜಿ.ರಾಜರಾಮ ಭಟ್ ಅವರು ಮಾತನಾಡಿ ಧರ್ಮ ಜಾಗೃತಿ ವೇದಿಕೆಯನ್ನು ೧೬ ಗ್ರಾಮಗಳ ಜನರ ಒಟ್ಟು ಸೇರಿಸುವಿಕೆಯೊಂದಿಗೆ ಕಟ್ಟಲಾಗಿದ್ದು ಯಾವುದೇ ರಾಜಕೀಯ ರಹಿತ, ಸಂಸ್ಜೃತಿ ಮತ್ತು ಸಂಸ್ಕಾರವನ್ನು ಬೆಳೆಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಇಂದು ಸಾವಿರ ಸಾವಿರ ಸಂಖ್ಯೆಯಲ್ಲಿ ಮುಖ್ಯವಾಗಿ ಮಹಿಳೆಯರು ಸೇರಿದ್ದಾರೆ. ಈ ಕಾರ್ಯಕ್ರಮಕ್ಕೆ ಯಾವುದೇ ಬ್ಯಾನರ್ ಕಟೌಟ್ ಮೂಲಕ ಜನರನ್ನು ಸೇರಿಸಿಲ್ಲ. ಭಜನೆಯ ಮೂಲಕ ಒಟ್ಟು ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಯಲಿ ಇನ್ನಷ್ಟು ಪ್ರಬಲವಾಗಿಸಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಧಾರ್ಮಿಕ ಕಾರ್ಯಕ್ರಮಗಳಾದ ಸಾಮೂಹಿಕ ಕುಂಕುಮಾರ್ಚನೆ, ಗಣಪತಿ ಹವಣ, ಶ್ರೀ ಸತ್ಯನಾರಾಯಣ ಪೂಜೆ, ಶಿವಪೂಜ, ದುರ್ಗಾಪೂಜೆ ಮುಂತಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಕನ್ಯಾಡಿ ಬಾಳೆಕೋಡಿ ಶ್ರೀ ಕಾಶೀ ಕಾಳಭೈರವೇಶ್ವರ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ, ಮುಡಿಪು ವಿಶ್ವಕರ್ಮ ಸಂಘದ ನಿಕಟಪೂರ್ವ ಅಧ್ಯಕ್ಷ ಹರೀಶ್ ಆಚಾರ್ಯ, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಘು ಸಪಲ್ಯ, ಮುಡಿಪು ಹವ್ಯಕ ವಲಯ ಮಾರ್ಗದರ್ಶಕ ಶಂಕರ ಭಟ್ ಕೊಣಾಜೆ ಉಪಸ್ಥಿತರಿದ್ದರು.ಸುರೇಖ ಟೀಚರ್ ಪ್ರಾರ್ಥಿಸಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಮಾರ್ಗದರ್ಶಕ ಸಂತೋಷ್ ಕುಮಾರ್ ಬೋಳಿಯಾರ್ ವಂದಿಸಿದರು.
ಸರಳ ಸಾಮೂಹಿಕ ವಿವಾಹ: ಮುಡಿಪುವಿನ ಧರ್ಮ ಜಾಗೃತಿ ವೇದಿಕೆಯ ಆಶ್ರಯದಲ್ಲಿ ಗುರುವಾರ ನಡೆದ ಧಾರ್ಮಿಕ ಕಾರ್ಯಕ್ರಮದೊಂದಿಗೆ ನರ್ಸನ್ನ ಸಮಾಜಕ್ಕೆ ಸೇರಿದ ಮೂರು ಜೋಡಿಗಳ ಸರಳ ವಿವಾಹ ಕಾರ್ಯಕ್ರಮ ನಡೆಯಿತು. ಜಯಾನಂದ ಮತ್ತು ಕವಿತ, ಮಧುರಾಜ್ ಮತ್ತು ಜ್ಯೋತಿ , ಶಿವರಾಮ ಮತ್ತು ಚಿತ್ರಾವತಿ ಹಿಂದೂ ಸಂಪ್ರದಾಯ ಪ್ರಕಾರವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.