ಬಂಟ್ವಾಳ: ನರಿಕೊಂಬು ವೀರ ಮಾರುತಿ ವ್ಯಾಯಾಮ ಶಾಲೆ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತೀಶ್ ಬಿ. ಮತ್ತು ಉಪಾಧ್ಯಕ್ಷರಾಗಿ ಮಹೇಶ್ ಕೆ ಆಯ್ಕೆಯಾಗಿದ್ದಾರೆ.
ವಾರ್ಷಿಕ ಮಹಾಸಭೆಯು ಶಶಿಧರ್ ಎನ್.ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ 2014-15ನೇ ಸಾಲಿನ ಲೆಕ್ಕಪತ್ರವನ್ನು ಹಾಗೂ ಚಟುವಟಿಕೆ ವರದಿಯನ್ನು ಕಾರ್ಯದರ್ಶಿಯಾದ ಶಮೀತ್ ಕೆ. ಮಂಡಿಸಿದರು.
ಕಾರ್ಯದರ್ಶಿಯಾಗಿ ಶಮಿತ್ ಕೆ, ಜೊತೆ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್, ಕೋಶಾಧಿಕಾರಿಯಾಗಿ ಶ್ರೀರಾಮ್ ಸುಜೀರ್, ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಪ್ರದೀಪ್ ಕೆ, ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಕಾರಿಂಜೆ, ಭಜನಾ ಕಾರ್ಯದರ್ಶಿಯಾಗಿ ಶೈಲೇಶ್, ಅನಿತ್, ತಿಲಕ್ರವರು ಸರ್ವಾನುಮತದಿಂದ ಆಯ್ಕೆಗೊಂಡರು. ಅಲ್ಲದೆ ೧೧ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅದೇ ರೀತಿ ನರಿಕೊಂಬು ವೀರಮಾರುತಿ ಮಹಿಳಾ ಮಂಡಳಿ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ದೇವಕಿ.ಕೆ ಮತ್ತು ಉಪಾಧ್ಯಕ್ಷೆಯಾಗಿ ಸಾವಿತ್ರಿ ಕೆ ಆಯ್ಕೆಯಾಗಿದ್ದಾರೆ.
ಇದರ ವಾರ್ಷಿಕ ಮಹಾಸಭೆಯು ಶ್ರೀಮತಿ ಗೀತಾ ಚಂದ್ರಹಾಸ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ 2014-15ನೇ ಸಾಲಿನ ಲೆಕ್ಕಪತ್ರವನ್ನು ಹಾಗೂ ಚಟುವಟಿಕೆ ವರದಿಯನ್ನು ಕಾರ್ಯದರ್ಶಿಯಾದ ಕುಮಾರಿ ಸಂಧ್ಯಾ ಮಂಡಿಸಿದರು. ಕಾರ್ಯದರ್ಶಿಯಾಗಿ ಪ್ರೇಮ ವಿ, ಜೊತೆ ಕಾರ್ಯದರ್ಶಿಯಾಗಿ ಅನಿತಾ ಕೆ, ಕೋಶಾಧಿಕಾರಿಯಾಗಿ ಶುಭ ಶಶಿಧರ್, ಕ್ರೀಡಾ ಕಾರ್ಯದರ್ಶಿಯಾಗಿ ಸರಿತಾ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಬಬಿತಾ, ಸಂಘಟನಾ ಕಾರ್ಯದರ್ಶಿಯಾಗಿ ವೇದಾವತಿ, ಭಜನಾ ಸಂಘಟನಾ ಕಾರ್ಯದರ್ಶಿಯಾಗಿ ಸಂಧ್ಯಾ ಹಾಗೂ ಕವಿತಾ ಕೆ. ರವರು ಸರ್ವಾನುಮತದಿಂದ ಆಯ್ಕೆಗೊಂಡರು. ಅಲ್ಲದೆ 9 ಸದಸ್ಯೆಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.