ಬೆಂಗಳೂರು : ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವರ್ಗಾವಣೆ ಮಾಡಲಾಗಿದೆ.
ಸೋನಿಯಾ ನಾರಂಗ್ ಪ್ರಸಕ್ತ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಭೇದಿಸುತ್ತಿದ್ದು, ಹಲವು ಅಕ್ರಮಕೋರರನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ವ್ಯವಸ್ಥಿತ ರೀತಿಯಲ್ಲಿ ಭೇದಿಸಿದ್ದಾರೆ.
ಆ ಬಳಿಕ ಸಿಐಡಿ ಅಧಿಕಾರಿ ಎಸ್.ಪಿ. ಮಧುರವೀಣಾ ಲಂಚ ಸ್ವೀಕೃತಿ ಆರೋಪದ ವಿರುದ್ಧ ತನಿಖೆಯನ್ನು ನಡೆಸುತ್ತಿದ್ದು ಈ ಇಬ್ಬರು ಅಧಿಕಾರಿಗಳಲ್ಲಿ ಕಿತ್ತಾಟ ಏರ್ಪಟ್ಟು ಎಸ್.ಪಿ. ಮಧುರವೀಣಾ ಲಂಚ ಸ್ವೀಕೃತಿ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲಾಗಿತ್ತು. ಅದರ ಬೆನ್ನಲೇ ಈ ವರ್ಗಾವಣೆಯಾಗಿರುವುದು ಕೂತೂಹಲ ಸೃಷ್ಟಿಸಿದೆ.
ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರಕ್ಕೆ ಎರವಲು ಸೇವೆ ಮೇಲೆ ತೆರಳುತ್ತಿದ್ದು, ಎನ್ಐಎಯಲ್ಲಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತನಿಖೆ ಮುಗಿದ ಬಳಿಕವೇ ಎನ್ಐಎಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.