ನವದೆಹಲಿ: ಮಡಮ್ ಟುಸ್ಸಾಡ್ಸ್ ಮ್ಯೂಸಿಯಂ ತಂಡ ರಚಿಸಿದ ತನ್ನ ಮೇಣದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ವೀಕ್ಷಿಸಿದ್ದು, ಇದರ ರಚನೆಕಾರರನ್ನು ಅವರು ಬ್ರಹ್ಮ ದೇವರಿಗೆ ಹೋಲಿಕೆ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಜನರ ಸೇವಕನಾಗಿ ಇವತ್ತು ನನಗೆ ನನ್ನ ವ್ಯಾಕ್ಸ್ ಪ್ರತಿಮೆಯನ್ನು ಭೇಟಿಯಾಗುವ ಅವಕಾಶ ಲಭಿಸಿತು’ ಎಂದಿದ್ದಾರೆ.
ಮೋದಿಯವರ ಟ್ರೇಡ್ಮಾಕ್ ಆದ ಕ್ರೀಮ್ ಬಣ್ಣದ ಕುರ್ತಾ, ಸ್ಲೀವ್ಲೆಸ್ ಜಾಕೆಟ್ ತೊಟ್ಟ ಈ ಪ್ರತಿಮೆಯನ್ನು ಕೈಮುಗಿದು ನಮಸ್ಕರಿಸುವ ಭಂಗಿಯಲ್ಲಿ ರಚನೆ ಮಾಡಲಾಗಿದೆ.
ಈ ಅದ್ಭುತ ಪ್ರತಿಮೆ ರಚಿಸಿದ ಟುಸ್ಸಾಡ್ಸ್ ತಂಡವನ್ನು ಶ್ಲಾಘಿಸಿದ ಮೋದಿ, ಬ್ರಹ್ಮ ಮಾಡುವುದನ್ನೇ ಈ ಕಲಾವಿದರ ತಂಡ ಮಾಡುತ್ತಿದೆ ಎಂದಿದ್ದಾರೆ.
ಪ್ರತಿಮೆ ರಚನೆಯ ಆರಂಭದಿಂದ ಕೊನೆಯವರೆಗೂ ಮೋದಿ ಅದರ ರಚನೆಕಾರರೊಂದಿಗೆ ಸಂಪರ್ಕದಲ್ಲಿದ್ದರು.
ಲಂಡನ್, ಸಿಂಗಾಪುರ, ಹಾಂಕ್ಕಾಂಗ್, ಬ್ಯಾಂಕಾಕ್ನ ಮಡಮ್ ಟುಸ್ಸಾಡ್ಸ್ನಲ್ಲಿ ಜಾಗತಿಕ ನಾಯಕರ ಪ್ರತಿಮೆಯೊಂದಿಗೆ ಮೋದಿ ಪ್ರತಿಮೆಯೂ ರಾರಜಿಸಲಿದೆ. ಏಪ್ರಿಲ್ 28 ರಂದು ಮ್ಯೂಸಿಯಂಗೆ ಒಯ್ಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.