ನವದೆಹಲಿ: ರೈಲ್ವೇ ಇಲಾಖೆ ಮುಂದಿನ ವರ್ಷದಿಂದ ಬುಲೆಟ್ ಟ್ರೈನ್ ಕಾರ್ಯವನ್ನು ಆರಂಭ ಮಾಡಲಿದೆ, ಆದರೆ ಭಾರತಕ್ಕೆ ಹೊಸ ಸ್ಪ್ಯಾನಿಶ್ ಸ್ಪೀಡ್ ಟ್ರೈನ್ ಮುಂದಿನ ವಾರವೇ ಆಗಮಿಸುತ್ತಿದೆ.
ಪರೀಕ್ಷಾರ್ಥ ಪ್ರಯೋಗವನ್ನು ಇದು ನಡೆಸಲಿದ್ದು, ರಾಷ್ಟ್ರ ರಾಜಧಾನಿಯಿಂದ ಮುಂಬಯಿಗೆ ಪ್ರಯಾಣಿಸಲಿದೆ.
ಈ ಸ್ಪ್ಯಾನಿಶ್ ರೈಲು ದೆಹಲಿಯಿಂದ ಮುಂಬಯಿಗೆ ಕೇವಲ 12 ಗಂಟೆಗಳಲ್ಲಿ ಪ್ರಯಾಣಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಟಲ್ಗೋದ ವೇರಿಯೇಬಲ್ ಗೇಜ್ ಟ್ರೈನ್ ಎಂದು ಕರೆಯಲಾಗಿದ್ದು, ಗಂಟೆಗೆ 200ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಪರೀಕ್ಷೆಯಿಂದ ತಿಳಿದು ಬಂದಿದೆ.
ಈ ರೈಲು ದೆಹಲಿಯಿಂದ ಮುಂಬಯಿಗೆ 4 ಗಂಟೆಗಳ ಪ್ರಯಾಣ ಸಮಯವನ್ನು ಉಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.