ಬೆಂಗಳೂರು : ಪಿಯು ಮೌಲ್ಯಮಾಪನ ಬಹಿಷ್ಕರಿಸಿ ಮುಷ್ಕರ ಕೈಗೊಂಡಿರುವ ಉಪನ್ಯಾಸಕರು ತಮ್ಮ ಮುಷ್ಕರವನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂಪಡೆದಿದ್ದಾರೆ.
ಮುಪ್ಕರನಿರತ ಉಪನ್ಯಾಸಕರು ಕಳೆದ 18 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಮೂಲವೇತನ ಹೆಚ್ಚಳ ಮತ್ತು ಕುಮಾರ್ ನಾಯಕ್ ವರದಿ ಅನುಷ್ಟಾನಕ್ಕಾಗಿ ಬೇಡಿಕೆಯನ್ನಿಟ್ಟು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಶಿಕ್ಷಕರೊಂದಿಗೆ ಮಾತುಕತೆ ನಡೆಸಲಾಯಿತು. ಸರಕಾರ ಕುಮಾರ್ ನಾಯಕ್ ವರದಿ ಅನುಷ್ಠಾನಕ್ಕೆ ಸಮ್ಮತಿಸದೆ ತನ್ನ ಪಟ್ಟನ್ನು ಸಡಿಲಿಸಲಿಲ್ಲ ಎಸ್ಮಾ ಜಾರಿಯ ಎಚ್ಚರಿಕೆಗೂ ಜಗ್ಗದ ಶಿಕ್ಷಕರು 18 ದಿನಗಳ ಕಾಲ ಮುಷ್ಕರ ನಡೆಸಿದರು.
ಸರಕಾರ ಶಿಕ್ಷಕರಿಗೆ 500 ರಿಂದ 900ರ ವರೆಗೆ ಭಡ್ತಿಯ ಬಗ್ಗೆ ಫೋಷಿಸಲಾಯಿತು. ಇದನ್ನು ಒಪ್ಪದ ಶಿಕ್ಷಕರು, ನಾವು ನಿಮ್ಮಿಂದ ಭಿಕ್ಷೆ ಕೇಳುತ್ತಿಲ್ಲ, ಕುಮಾರ್ ನಾಯಕ್ ವರದಿಯನ್ನು ಯತಾವತ್ ಜಾರಿಗೊಳಿಸಿ ಎಂದು ಶಿಕ್ಷಕರು ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಗ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪೂರ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೇ ಶಿಕ್ಷಕರು ಪ್ರತಿಭಟನೆ ನಡೆಸಲಿದ್ದು ಪ್ರತಿಭಟನಾರೂಪದಲ್ಲಿ ಸರಕಾರ ನೀಡಿದ ಒದು ಭಡ್ತಿಯನ್ನು ಸರಕಾರಕ್ಕೆ ವಾಪಸ್ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಶಿಕ್ಷಕರ ಮುಷ್ಕರ ಹಿಂತೆಗೆತದಿಂದಾಗಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಮೌಲ್ಯಮಾಪನದ ಬಗ್ಗೆ ನೆಲೆಗೊಂಡಿದ್ದ ಆತಂಕ ದೂರವಾದಂತಾಗಿದೆ.
ಒಟ್ಟಿನಲ್ಲಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಕರ ಮುಷ್ಕರ, ಬರ ಪರಿಹಾರ ನೇರಿದಂತೆ ಹಲವು ರಂಗದಲ್ಲಿ ಸೂಕ್ಷ್ಮತೆ ಪ್ರದರ್ಶಿಸದೆ ಎಡವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.