ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ಅವರ ಶಿಷ್ಯ ತತ್ಕರ ಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಏ. 22 ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಪುನರ್ ನಿರ್ಮಾಣದ ಸಂದರ್ಭ ಆಗಮಿಸಲಿದ್ದು ಗರ್ಭಗುಡಿಯಲ್ಲಿ ನವರತ್ನ ನಿಕ್ಷೇಪ ಮಾಡಿ ಹರಸಲಿದ್ದಾರೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಸ್. ಗೋಖಲೆ ತಿಳಿಸಿದರು ಅವರು ಮಂಗಳವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶ್ರೀಗಳ ಕಾರ್ಯಕ್ರಮ ಬಗ್ಗೆ ವಿವರಿಸಿದರು.
1980 ರಲ್ಲಿ ಶೃಂಗೇರಿಯ ಹಿಂದಿನ ಜಗದ್ಗುರು ಶ್ರೀ ಮದಭಿನವ ವಿದ್ಯಾತೀರ್ಥ ಶ್ರೀಗಳು ದೇವಳಕ್ಕೆ ಆಗಮಿಸಿದ್ದರು. ಇದೀಗ 36 ವರ್ಷಗಳ ಬಳಿಕ ಶೃಂಗೇರಿ ಈಗೀನ ಶ್ರೀಮಜ್ಜಗದ್ಗುರುಗಳು ತಮ್ಮ ಶಿಷ್ಯನೊಂದಿಗೆ ಕ್ಷೇತ್ರಕ್ಕೆ ಎ. 22 ರಂದು ಬೆಳಗ್ಗೆ ಬರುತ್ತಿದ್ದಾರೆ. ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ನಡೆಯುತ್ತಿದ್ದು ಈ ಸಂದರ್ಭ ಶ್ರೀಮಜ್ಜಗದ್ಗುರುಗಳವರು ದೇವಳದ ಗರ್ಭಗುಡಿಯಲ್ಲಿ ನವರತ್ನ ನಿಕ್ಷೇಪ ಮಾಡಲಿದ್ದಾರೆ. ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಗುವುದು. ಈ ಸಂದರ್ಭ ಕ್ಷೇತ್ರದ ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ವಿನಂತಿಸಿದರು.
ಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ವೆಂಕಟ್ರಾಯ ಅಡೂರು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪ್ರೇಮಾನಂದ ಫಡ್ಕೆ, ಜೀರ್ಣೋದ್ಧಾರ ಸಮಿತಿ ಸಹಕಾರ್ಯದರ್ಶಿ ಎ. ರಾಮಣ್ಣ ಶೆಟ್ಟಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.