ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಪ್ರೈಸ್ಗಳನ್ನು ನೀಡುವುದರಲ್ಲಿ ನಿಸ್ಸೀಮರು. ಯಾವುದೇ ಕಾರ್ಯವನ್ನು ಅವರು ಇದೇ ರೀತಿ ಮಾಡುತ್ತಾರೆ ಎಂದು ಮೊದಲೇ ನಿರೀಕ್ಷಿಸುವುದು ಅಷ್ಟು ಸುಲಭದ ಮಾತಲ್ಲ. ಪ್ರಮಾಣವಚನಕ್ಕೆ ಸಾರ್ಕ್ ನಾಯಕರ ಆಹ್ವಾನದಿಂದ ಹಿಡಿದು ಪಾಕಿಸ್ಥಾನಕ್ಕೆ ದಿಢೀರ್ ಭೇಟಿ ಕೊಡುವವರೆಗೆ ಅವರು ಆಚ್ಚರಿಗಳನ್ನು ನೀಡುತ್ತಾರೆ.
ಇದೀಗ ಇದೇ ರೀತಿಯ ಅನಿರೀಕ್ಷಿತ ಕಾರ್ಯವನ್ನು ಒಲಿಂಪಿಕ್ಸ್ ಸಂದರ್ಭ ಮಾಡಲು ಅವರು ಮುಂದಾಗಿದ್ದಾರೆ. ಅಗಸ್ಟ್ ತಿಂಗಳಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ಗೆ ಸಂಬಂಧಿಸಿದಂತೆ ಅವರ ಸರ್ಕಾರ ಮಹತ್ವದ ಕಾರ್ಯವನ್ನು ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ರಿಯೋ ಒಲಿಂಪಿಕ್ಸ್ ವೇಳೆ ’ಮೇಕ್ ಇನ್ ಇಂಡಿಯಾ’ವನ್ನು ಪ್ರಚಾರ ಮಾಡಲು ಮುಂದಾಗಿದೆ, ಅಲ್ಲದೇ ಕಬಡ್ಡಿಯ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಮತ್ತು ಕ್ರೀಡಾ ಯೋಜನೆಗಳನ್ನು ಅಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.
ಭಾರತೀಯ ಕಲೆ, ಸಂಸ್ಕೃತಿ, ಪ್ರವಾಸೋದ್ಯಮವನ್ನು ಉತ್ತೇಜಿಸಲು ರಿಯೋದಲ್ಲಿ ಹಾಸ್ಪಿಟಾಲಿಟಿ ಹೌಸ್ಗಳನ್ನು ರಚನೆ ಮಾಡಲಿದೆ. ಭಾರತ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಹಾಸ್ಪಿಟಾಲಿಟಿ ಹೌಸ್ಗಳನ್ನು ಸ್ಥಾಪಿಸಲು ಮುಂದಾಗುತ್ತಿರುವುದು.
ಇದಕ್ಕಾಗಿ ಬ್ರೆಝಿಲ್ನಲ್ಲಿನ ಭಾರತೀಯ ರಾಯಭಾರ ಕಛೇರಿ ಈ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ರಿಯೋದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಕ್ರೀಡೆಯನ್ನು ಪ್ರಚಾರಪಡಿಸಲು ಹಾಸ್ಪಿಟಾಲಿಟಿ ಹೌಸಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಬಜೆಟ್ನ್ನು ಕೂಡ ಸಿದ್ಧಪಡಿಸಲಾಗುತ್ತಿದೆ.
ಒಲಿಂಪಿಕ್ ವಿಲೆಜ್ನಲ್ಲಿ ಅಪಾರ್ಟ್ಮೆಂಟ್ನ್ನು ರೆಂಟಿಗೆ ಕೊಡುವ ಉದ್ದೇಶವೂ ಇದ್ದು, ಅಲ್ಲಿ ಭಾರತೀಯ ಹಾಲು, ಬಾದಾಮಿಗಳು ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.