ನವದೆಹಲಿ: ಎಎಪಿ ಪಕ್ಷದ ಷೋಕಾಸು ನೋಟಿಸ್ಗೆ ತೀಕ್ಷ್ಣ ಶಬ್ದಗಳ ಮೂಲಕ ಉತ್ತರ ನೀಡಿರುವ ಬಂಡಾಯ ನಾಯಕ ಯೋಗೇಂದ್ರ ಯಾದವ್, ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಬಾರದು ಎಂದಿದ್ದಾರೆ.
‘ಸದಸ್ಯರು, ಪದಾಧಿಕಾರಿಗಳಲ್ಲದವರು ಪಕ್ಷದೊಳಗೆ ಅಥವಾ ಹೊರಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸ್ವತಂತ್ರರು. ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಬಾರದು’ ಎಂದಿದ್ದಾರೆ.
ಯಾದವ್ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಎ.17ರಂದು ಯಾದವ್, ಪ್ರಶಾಂತ್ ಭೂಷಣ್, ಆನಂದ್ ಕುಮಾರ್ ಮತ್ತು ಅಜಿತ್ ಜಾ ಅವರಿಗೆ ಎಎಪಿ ಷೋಕಾಸು ನೋಟಿಸ್ ಜಾರಿಗೊಳಿಸಿತ್ತು.
ಆದರ್ಶ ರಾಜಕಾರಣದ ಭರವಸೆ ಮೂಡಿಸಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ಎಎಪಿ ಪಕ್ಷ ಇದೀಗ ತನ್ನ ಕಾರ್ಯಕ್ಕಿಂತಲೂ ಹೆಚ್ಚಾಗಿ ಭಿನ್ನಮತದಿಂದಲೇ ಸುದ್ದಿ ಮಾಡುತ್ತಿರುವುದು ವಿಪರ್ಯಾಸ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.