ಬೆಂಗಳೂರು : ಐಪಿಎಲ್ ಪಂದ್ಯಾಟಗಳಿಗೆ ಬೇಕಾಗುವ ನೀರಿನ ಪ್ರಮಾಣದ ಲೆಕ್ಕ ನೀಡುವಂತೆ ಪರಿಸರವಾದಿ ಹೋರಾಟಗಾರ ಶ್ರೀನಿವಾಸ ಶರ್ಮ ಅವರು ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯು ಸ್ಟೇಡಿಯಂನಲ್ಲಿ ಐಪಿಎಲ್ ಮುಖ್ಯಸ್ಥರು ಮತ್ತು ಬಿಸಿಸಿಐ ತನ್ನ ಆಟಗಳಿಗಾಗಿ ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಸುತ್ತಾರೆ ಎಂದು ನೀರಿನ ಲೆಕ್ಕದ ಪರಿಶೋಧನೆ ನಡೆಸಬೇಕು ಎಂದು ಕೋರ್ಟ್ನಲ್ಲಿ ಪಿಐಎಲ್ ದಾಖಲಿಸಿದ್ದಾರೆ.
ಐಪಿಎಲ್ ಪಂದ್ಯಾಟಗಳನ್ನು ನಡೆಸುತ್ತಿರುವ ಬಿಸಿಸಿಐಗೆ ಮತ್ತು ಕೆಎಸ್ಸಿಎಗೆ ಬೃಹತ್ ಮಟ್ಟದಲ್ಲಿ ನೀರಿನ ಪೋಲನ್ನು ತಡೆಯುವಲ್ಲಿ ಮತ್ತು ಸಾರ್ವಜನಿಕರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಾಮಾಜಿಕ ಕಾಳಜಿಗಳಿಲ್ಲವೇ ಎಂದು ಪ್ರಶ್ನಿಸಲಾಗಿದೆ.
ನೀರಿನ ಅಭಾವ ಮತ್ತು ಬರಗಾರದ ಸಂದರ್ಭ ಸಾರ್ವಜನಿಕರು ನೀರಿನ ಸಮಸ್ಯೆ ಅನುಭವಿಸುತ್ತಿದ್ದು, ಈ ಸಂದರ್ಭ ವಿವೇಚನಾರಹಿತವಾಗಿ ಐಪಿಎಲ್ಗೆ ನೀರನ್ನು ಒದಗಿಸುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಪ್ರಾಧಿಕಾರಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಅವರು ಕೋರಿದ್ದಾರೆ.
ಐಪಿಎಲ್ ಪಂದ್ಯಾಟಗಳನ್ನು ನಡೆಸುತ್ತಿರುವುದರಿಂದ ಸಾಮಾಜಿಕವಾಗಿ ಜನರಿಗಾಗಲಿ ಅಥವಾ ಸರಕಾರಕ್ಕಾಗಲಿ ಹೆಚ್ಚಿನ ಲಾಭವಿಲ್ಲ. ಸಣ್ಣ ಮಟ್ಟದ ಆದಾಯ ಸರಕಾರಕ್ಕೆ ದೊರಕುವುದೇ ವಿನಃ ಈ ಕ್ರೀಡೆಯೆಂದ ಮನರಂಜನೆ ಮಾತ್ರ ಸಾಧ್ಯ. ಸಾಮಾಜಿಕ ಪರಿವರ್ತನೆ ಮತ್ತು ಕಳಕಳಿಗಳಲ್ಲ.
ಐಪಿಎಲ್ ಪಂದ್ಯಾಟಗಳಿಂದ ಬಿಸಿಸಿಐ, ಕೆಎಸ್ಸಿಎಮತ್ತು ಅದರ ತಂಡಗಳು ಹೆಚ್ಚಿನ ಪ್ರಮಾಣದಲ್ಲಿ ಲಾಭಹೊಂದುವ ಕಾರಣ ಈ ಪಂದ್ಯಗಳನ್ನು ನಡೆಸಲಾಗುತ್ತದೆ ಎಂದವರು ಹೇಳಿದ್ದಾರೆ.
ಈ ಹಿಂದೆ ಭ್ರಷ್ಟಾಚಾರದ ಮತ್ತು ಬೆಟ್ಟಿಂಗ್ ಹಗರಣಗಳ ಗೂಡಾಗಿರುವ ಐಪಿಎಲ್ ಅನ್ನು, ಈವರೆಗೆ ನಡೆಸಲು ಸರಕಾರ ಬಿಟ್ಟಿರುವುದು ಆಶ್ಚರ್ಯ ಮತ್ತು ಆತಂಕಕಾರಿಯಾಗಿದೆ. ಇದೇ ವಿಷಯದಲ್ಲಿ ಲಲಿತ್ ಮೋದಿ ಭಾರತ ಬಿಟ್ಟಿರುವುದು ಎಲ್ಲರಿಗೂ ತಿಳಿದ ವಿಷಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.