ನವದೆಹಲಿ: ಲೋಕಪಾಲ ಕಾಯಿದೆ ಅಡಿ ಸರ್ಕಾರಿ ನೌಕರರು ಕಳೆದ 2 ವರ್ಷದ ತಮ್ಮ ಹಾಗೂ ಪತ್ನಿ, ಮಕ್ಕಳ ಆಸ್ತಿ ವಿವರವನ್ನು ಕಡ್ಡಾಯವಾಗಿ ಎ.15ರ ಒಳಗಾಗಿ ಘೋಷಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶಿಸಿದೆ.
ವಿವಿಧ ಸೇವಾ ನಿಯಮಗಳ ಅಡಿ ನೌಕರರು ನೀಡಿದ ಜೊತೆಯಲ್ಲಿ ಲೋಕಪಾಲ ಕಾನೂನು ಅಡಿ ಈ ವಿವರಗಳನ್ನು ನೀಡುವಂತೆ ಮನವಿ ಮಾಡಲಾಗಿದೆ.
ಸರ್ಕಾರಿ ನೌಕರರು ವಿದೇಶಿ ಬ್ಯಾಂಕ್ಗಳ ಖಾತೆ ವಿವರ, ದುಬಾರಿ ವರ್ಣಚಿತ್ರಗಳು, ಪೀಠೋಪಕರಣ, ಎಲೆಕ್ಟ್ರಾನಿಕ್ ಸಾಧನಗಳು, ಚರ ಆಸ್ತಿ, ವಿಮೆ, ಬಾಂಡ್, ಷೇರುಗಳು, ಮ್ಯೂಚುವಲ್ ಫಂಡ್ ಮತ್ತಿತರ ವಿವರಗಳನ್ನು ನೀಡುವಂತೆ ಹೇಳಿದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳು ತಮ್ಮ ಆಸ್ತಿ ವಿವರ ಘೋಷಣೆ ಖಚಿತಪಡಿಸುವಂತೆ ಇಲಾಖೆ ಕೇಂದ್ರ ಸರ್ಕಾರಿ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.2014-15ರ ಆಸ್ತಿ ವಿವರಗಳನ್ನು ಎ.15ರ ಒಳಗೆ ನೀಡಬೇಕಿದ್ದು, 2016ರ ಆಸ್ತಿ ವಿವರವನ್ನು ಜುಲೈ 31ರ ಒಳಗಾಗಿ ಘೋಷಿಸುವಂತೆ ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.