ನವದೆಹಲಿ: ರಸ್ತೆ ಅಪಘಾತಗಳ ಸಂದರ್ಭ ಗಾಯಾಳುಗಳಿಗೆ ಸಹಾಯಹಸ್ತ ನೀಡಲು ಬಯಸಿದ ’ಪರೋಪಕಾರಿ’ಗಳ ರಕ್ಷಣೆಗೆ ರೂಪಿಸಲಾಗಿರುವ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ.
ಸಹಾಯಹಸ್ತ ನೀಡುವ ವ್ಯಕ್ತಿಗಳ ಮೇಲಿನ ಕಿರುಕುಳವನ್ನು ತಡೆಯಲು ಈ ಮಾರ್ಗಸೂಚಿ ರೂಪಿಸಲಾಗಿದ್ದು, ಅಂತಹ ವ್ಯಕ್ತಿಗಳಿಗೆ ರಕ್ಷಣೆ ಒದಗಿಸಲಾಗುವುದು ಹಾಗೂ ಆ ಅಪರಾಧಗಳ ಹೊಣೆಗಾರಿಕೆಯಿಂದ ಮುಕ್ತರಾಗಲಿದ್ದಾರೆ.
ಕೇಂದ್ರ ಸರ್ಜಾರ ರಚಿಸಿರುವ ಮಾರ್ಗಸೂಚಿ ಪ್ರಕಾರ ಅಪಘಾತಗಳಲ್ಲಿ ಜೀವರಕ್ಷಣೆಗೆ ಮುಂದಾಗುವ ಜನರು, ಪೊಲೀಸರು ಮತ್ತಿತರ ಯಾವುದೇ ಕಿರುಕುಳದ ಬಗ್ಗೆ ಭಯಪಡಬೇಕಾಗಿಲ್ಲ. ಈ ಮಾರ್ಗಸೂಚಿಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ಜೀವರಕ್ಷಣೆಗೆ ಮುಂದಾಗುವ ವ್ಯಕ್ತಿಗಳ ರಕ್ಷಣೆಗೆ ಮಾರ್ಗಸೂಚಿ ರೂಪಿಸುವಂತೆ ಡಿ.30, 2014ರಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ನೇಮಿತ ಕೆ. ಸ್ಕಂದನ್ ಕಮಿಟಿ ಇಂತಹ ವ್ಯಕ್ತಿಗಳನ್ನು ಅಪರಾಧ ಮತ್ತು ನಾಗರಿಕ ಹೊಣೆಗಾರಿಕೆಗೆ ಜವಾಬ್ದಾರರನ್ನಾಗಿಸಬಾರದು. ಅವರನ್ನು ಬಲವಂತವಾಗಿ ತಮ್ಮ ಗುರುತು ಬಹಿರಂಗಪಡಿಸುವಂತೆ ಮಾಡಬಾರದು ಮತ್ತು ಕೋರ್ಟ್ ವಿಚಾರಣೆಗೆ ಕರೆಸಿಕೊಳ್ಳದಂತೆ ಕಮಿಟಿ ಶಿಫಾರಸ್ಸು ಮಾಡಿದೆ.
ಅಪಘಾತಕ್ಕೊಳಗಾದವರ ಚಿಕಿತ್ಸೆಗೆ ನಿರಾಕರಿಸುವ ವೈದ್ಯರ ವಿರುದ್ಧ ಭಾರತೀಯ ವೈದ್ಯಕೀಯ ಮಂಡಳಿ ಮಾರ್ಗಸೂಚಿ ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಇಂತಹವರನ್ನು ಎಲ್ಲಾ ಆಸ್ಪತ್ರೆಗಳು ಪ್ರವೇಶ ನೀಡಬೇಕು. ರಕ್ಷಣೆಗೆ ಸಹಕರಿಸಿದವರನ್ನು ಆಸ್ಪತ್ರೆಗಳು ರಿಜಿಸ್ಟ್ರೇಷನ್ ಮಾಡುವಂತೆ ಒತ್ತಾಯಿಸಬಾರದು ಎಂದು ಕಮಿಟಿ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.