ಇಟರ್ಸಿ: ತಮ್ಮ ಬಾಟಲಿಯ ನೀರನ್ನು ಅನುಮತಿ ಇಲ್ಲದೆ ಕುಡಿದ ಎಂಬ ಕಾರಣಕ್ಕೆ ಮೂವರು ಯುವಕರು ಪ್ರಯಾಣಿಕನೋರ್ವನನ್ನು ಚಲಿಸುತ್ತಿರುವ ರೈಲಿನ ಕಿಟಕಿಗೆ ಕಟ್ಟಿ ಹಾಕಿದ ಅಮಾನುಷ ಘಟನೆ ಜಬಲ್ಪುರದಲ್ಲಿ ಮಾ. 25 ರಂದು ನಡೆದಿದೆ.
ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದ ಸುಮಿತ್ ಎಂಬ ಯುವಕ ತನ್ನ ಊರಿನಿಂದ ಮತ್ತೆ ಮುಂಬಯಿಗೆ ವಾಪಾಸ್ಸಾಗುವ ಸಲುವಾಗಿ 11 ಗಂಟೆ ರಾತ್ರಿಯ ವೇಳೆಗೆ ಪಾಟ್ನಾ ಲೋಕಮಾನ್ಯ ತಿಲಕ್ ಟರ್ಮಿನಸ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಹತ್ತಿದ.
ಈ ವೇಳೆ ಆತ ಮೂವರು ಯುವಕರ ಗುಂಪಿಗೆ ಸೇರಿದ ನೀರಿನ ಬಾಟಲಿಯಿಂದ ಎರಡು ಗುಟುಕು ನೀರನ್ನು ಕೇಳದೆಯೇ ಕುಡಿದುಬಿಟ್ಟಿದ್ದಾನೆ. ಇದರಿಂದ ಉದ್ರಿಕ್ತಗೊಂಡ ಆ ಯುವಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ ಸುಮಿತ್ನನ್ನು ಎಳೆದು ಕಿಟಕಿಯ ಬಾಗಿಲಿಗೆ ಕಟ್ಟಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಮನಬಂದಂತೆ ಥಳಿಸಿದ್ದಾರೆ.
ಬಳಿಕ ರೈಲು ಚಲಿಸಿದಾಗಲೂ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಸುಮಿತ್ ಕಿಟಕಿಯಲ್ಲಿ ನೇತಾಡಿಕೊಂಡಿದ್ದ, ಆ ಧುರುಳ ಯುವಕರು ಪದೇ ಪದೇ ಬಾಗಿಲಿನ ಸಮೀಪ ಬಂದು ತಮ್ಮ ಬೆಲ್ಟ್ ಮೂಲಕ ಆತನಿಗೆ ಥಳಿಸುತ್ತಿದ್ದರು ಎನ್ನಲಾಗಿದೆ.
ಬಳಿಕ ಇತರ ಪ್ರಯಾಣಿಕರ ಮಧ್ಯಪ್ರವೇಶದಿಂದ ಸುಮಿತ್ನನ್ನು ಕೆಳಗಿಳಿಸಲಾಯಿತು. ಘಟನೆಯ ಬಗ್ಗೆ ರೈಲ್ವೇ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಆ ಯುವಕರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಸಾರ್ವಜನಿಕರು ಪ್ರಯಾಣಿಸುವ ರೈಲಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಅಘಾತಕಾರಿ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.