ಮುಂಬಯಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ವನ್ನು ನೀಡುವ ಮೂಲಕ ಅವರಿಗೆ ಅವಮಾನ ಮಾಡುತ್ತಿರುವ ಕಾಂಗ್ರೆಸ್ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸಬೇಕು ಎಂದು ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ಶ್ರೇಷ್ಠ ಸ್ವತಂತ್ರ್ಯ ಹೋರಾಟಗಾರ, ಮಹಾರಾಷ್ಟ್ರದ ಕಣ್ಮಣಿ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ದಯಪಾಲಿಸಬೇಕು ಎಂದು ಉದ್ಧವ್ ಹೇಳಿದ್ದಾರೆ.
ಅಲ್ಲದೇ ಈ ವಿಷಯವನ್ನು ಶಿವಸೇನೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲು ಸಜ್ಜಾಗಿದೆ.
ಈ ಹಿಂದೆ ರಾಹುಲ್ ಗಾಂಧಿ ಅವರು, ಬಿಜೆಪಿ ಸಾವರ್ಕರ್ ಸಿದ್ಧಾಂತಗಳ ಅನ್ವಯ ನಡೆಯುತ್ತಿದೆ, ನಾವು ಮಹಾತ್ಮ ಗಾಂಧಿಯ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದಿದ್ದರು. ಅಲ್ಲದೇ ಇತ್ತೀಚಿಗೆ ಭಗತ್ ಸಿಂಗ್ ದೇಶಪ್ರೇಮಿ, ಸಾರ್ವಕರ್ ದೇಶದ್ರೋಹಿ ಎಂದು ಕಾಂಗ್ರೆಸ್ ಟ್ವಿಟರ್ ಮೂಲಕ ಹೇಳಿತ್ತು.
ಇದಕ್ಕೆ ಬಿಜೆಪಿ, ಶಿವಸೇನಾ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.