ಬಂಟ್ವಾಳ : ಬಿಸಿರೋಡಿಗೆ ಸಮೀಪದ ಗಾಣದ ಪಡ್ಪು ಎಂಬಲ್ಲಿ ಅವೈಜ್ವಾನಿಕವಾಗಿ ಹೆದ್ದಾರಿಗೆ ದಿಡೀರನೇ ಹಮ್ಸ್ ನಿರ್ಮಿಸಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ವಾಹನ ಚಾಲಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬಂಟ್ವಾಳ ಕಡೂರು ಹೆದ್ದಾರಿಯ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ರಸ್ತೆಗೆ ದಿಡೀರನೇ ಉಬ್ಬು ನಿರ್ಮಿಸಲಾಗಿದ್ದು ವಾಹನ ಸವಾರರು ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರು ಡಿಕ್ಕಿ ಹೊಡೆದು ತೊಂದರೆ ಅನುಭವಿಸುವಂತಾಗಿದೆ.
ಇಲ್ಲಿ ನಾರಾಯಣ ಗುರು ಮಂದಿರ ಹೊರತು ಪಡಿಸಿದಂತೆ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಮನೆಗಳಾಗಲಿ ಇರುವುದಿಲ್ಲ. ಹಾಗಾಗಿ ಈ ಹಮ್ಸ್ ನ್ನು ಯಾಕಾಗಿಯಾದರೂ, ಯಾವ ಉದ್ದೇಶಕ್ಕಾದರೂ ಹಾಕಲಾಗಿದೆ ಎಂದು ಸಾರ್ವಜನಿಕರನ್ನು ಹಾಗೂ ವಾಹನ ಚಾಲಕರನ್ನು ಕಾಡಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಮನೆಯ ಎದುರುಗಡೆ ಇತ್ತೇಚೆಗೆ ಬಂಟ್ವಾಳ ಲೋಕೋಪಯೋಗಿ ಇಲಾಖೆ ಅವೈಜಾನಿಕವಾಗಿ ಹಮ್ಸ್ ನ್ನು ನಿರ್ಮಿಸಿತ್ತು .
ಇಲ್ಲಿ ಕೂಡಾ ಹಲವು ರಿಕ್ಷಾ ಹಾಗೂ ದ್ವಿಚಕ್ರ ಸವಾರರು ಪಲ್ಟಿ ಹೊಡೆದು ಗಾಯಗೊಂಡಿದ್ದರು. ಈ ವಿಚಾರ ಕಳೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚಚೆಗೂ ಕಾರಣವಾಗಿ ಇದರ ತೆರವಿಗೆ ಪುರಸಭೆ ಲೋಕೋಪಯೋಗಿ ಇಲಾಖೆಗೆ ಸೂಸಿಸಿದ್ದು ಆದರೆ ಲೋಕೋಪಯೋಗಿ ಇಲಾಖೆ ಒಂದು ಬದಿಯ ಹಮ್ಸ್ ನ್ನು ನೆಪ ಮಾತ್ರಕ್ಕೆ ಸಮತಟ್ಟು ಮಾಡಿದರೆ ಇನ್ನೊಂದು ಬದಿಯ ಹಮ್ಸ್ ಯಥಾ ಸಿತಿಯಲ್ಲಿದೆ. ಇದೀಗ ಗಾಣದಪಡ್ಡುಪುವಿನಲ್ಲಿ ಬುಧವಾರದಂದು ದಿಡೀರನೆ ಹಮ್ಸ್ ನಿರ್ಮಿಸಲಾಗಿದೆ. ಇದಕ್ಕೆ ಝೀಬ್ರಾ ಬಣ್ಣವನ್ನು ಕೂಡಾ ಬಳಿಯದಿರುವುದು ವಾಹನ ಚಾಲಕರನ್ನು ಗೊಂದಲಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.